ಜಾಲ್ಸೂರು: ಹೆಣ್ಣುಶಿಶು ಪ್ರದರ್ಶನ ಹಾಗೂ ಪೋಷಣ್ ಮಾಸಾಚರಣೆ ಪೌಷ್ಟಿಕ ಸಪ್ತಾಹ

0

 

ಸುಳ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ವರಲಕ್ಷ್ಮಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಹಾಗೂ ಜಾಲ್ಸೂರು ಗ್ರಾಮದ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಹೆಣ್ಣು ಶಿಶು ಪ್ರದರ್ಶನ ಹಾಗೂ ಪೋಷಣ್ ಮಾಸಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವು ಜಾಲ್ಸೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ.21ರಂದು ನಡೆಸಲಾಯಿತು.

ವರಲಕ್ಷ್ಮಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಆರ್ಭಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಶಿಶು ಅಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯದ ಮೇಲ್ವಿಚಾರಕಿ ಶ್ರೀಮತಿ ಉಷಾಪ್ರಸಾದ್ ರೈ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯ ಅರೋಗ್ಯ ಅಧಿಕಾರಿ ಶ್ರೀಮತಿ ರಚನಾ, ಶ್ರೀಮತಿ ತಿಲಕ, ವರಲಕ್ಷ್ಮಿ ಗೊಂಚಲಿನ ಉಪಾಧ್ಯಕ್ಷೆ ಶ್ರೀಮತಿ ಆಶಾ ರೈ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ತಿಲಕ ಪೌಸ್ಟಿಕ ಆಹಾರ ಹಾಗೂ ಅರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಗ್ರಾ.ಪಂ. ಸಿಬ್ಬಂದಿ ಚಿದಾನಂದ ದರ್ಖಾಸ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ನಡೆಸಿ , ಪ್ರಥಮ ದ್ವಿತೀಯ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನವನ್ನು ಇಲಾಖೆಯ ವತಿಯಿಂದ ನೀಡಲಾಯಿತು. ಪೌಸ್ಟಿಕ ಆಹಾರ ಮಾಡಿ ತಂದಿರತಕ್ಕಂತ ಸ್ತ್ರೀ ಶಕ್ತಿ ಸದಸ್ಯರಿಗೆ ಪೋಷಕರಿಗೆ ಪ್ರಥಮ ದ್ವಿತೀಯ ಹಾಗು ಪ್ರೋತ್ಸಾಹಕ ಬಹುಮಾನ ವನ್ನು ಗೊಂಚಲಿನ ವತಿಯಿಂದ ನೀಡಲಾಯಿತು. ಶ್ರೀಮತಿ ಗಿರಿಜಾ ಕದಿಕಡ್ಕ ಪ್ರಾರ್ಥಿಸಿ, ಶ್ರೀಮತಿ ಸುಮಂಗಲಿ ನಾಯಕ್ ಸ್ವಾಗತಿಸಿದರು. ಸ್ತ್ರೀಶಕ್ತಿ ಗೊಂಚಲು ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಜಾಲ್ಸೂರು ವಂದಿಸಿದರು. ಕೋನಡ್ಕ ಪದವು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು. ಬೊಳುಬೈಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬೇಬಿಕುಮಾರಿ, ಸೋಣಂಗೇರಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರವಿಕಲಾ, ಮರಸಂಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಅಂಜಲಿ, ಕುಕ್ಕಂದೂರು ಅಂಗನವಾಡಿ ಕಾರ್ಯಕರ್ತೆ ಕುಮಾರಿ ತುಳಸಿ, ಅಡ್ಕಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರೇಮಲತಾ ಹಾಗೂ ಸಂಜೀವಿನಿ ಸಂಘದ ಸದಸ್ಯೆ ಕು‌. ಚಂದ್ರಕಲಾ ಸಹಕರಿಸಿದರು‌. ಮಕ್ಕಳ ತಾಯಂದಿರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರ ಬಿ. ಪಿ. ಹಾಗೂ ಶುಗರ್ ಪರಿಶೀಲನೆಯನ್ನು ಸಮುದಾಯ ಅರೋಗ್ಯ ಅಧಿಕಾರಿಯವರು ನಡೆಸಿದರು.

 

LEAVE A REPLY

Please enter your comment!
Please enter your name here