ಪೆರಾಜೆ ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ

0

 

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದಲ್ಲಿ 2021-22ರ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿದ ಕೊಡಗು ಜಿಲ್ಲೆಯ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಥಮ ಸ್ಥಾನ ದೊರಕಿದೆ.
ಸಂಸ್ಥೆಯ 2021-22 ನೇ ಸಾಲಿನ ಮಹಾಸಭೆಯಲ್ಲಿ ಸ್ಕ್ಯಾಡ್ಸ್ ಅಧ್ಯಕ್ಷರಾದ ಶ್ರೀ ಕೆ ರವೀಂದ್ರ ಕಂಬಳಿ ಇವರು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶ್ರೀಮತಿ ಪ್ರಮೀಳಾ ಎನ್ ಬಂಗಾರಕೋಡಿ ಇವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.