ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆ, ಅಭಿವೃದ್ಧಿ ಚಿಂತನೆ

0

 

 

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆ, ಅಭಿವೃದ್ಧಿಯ ಹಿನ್ನಲೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ಕಾರ್ಯಕ್ರಮ ಸೆ.ವ೨೧ರಂದು ನಡೆಯಿತು.
ಶ್ರೀಧರನ್ ಪೆರುಂಬಾಳ್ ಮತ್ತು ಲಕ್ಷ್ಮೀನಾರಾಯಣ ಅಮ್ಮಂಗೋಡುರವರ ನೇತೃತ್ವದಲ್ಲಿ ಚಿಂತನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎ.ಕೆ. ಮಣಿಯಾಣಿ ಸಹಕರಿಸಿದರು.
ಈ ಸಂದರ್ಭದಲ್ಲಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳು ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪಗೌಡ ಅಲಾಜೆ, ಭಾಗ್ಯಪ್ರಸನ್ನ, ರೂಪರಾಜ ರೈ, ವಾರಿಜಾಕ್ಷಿ ಕೆವಿಜಿ, ರಘುನಾಥ ಎಂಜಿರು, ಶಿವಾನಂದ ನಾಗನಮಜಲು, ರಮಾನಂದ ರೈ ಪೊಳೆಂಜ, ಅಶೋಕ್ ಕುಮಾರ್ ರೈ ಊರುಸಾಗು, ನವೀನ್ ಕುಮಾರ್ ಬೊಳ್ಕಜೆ, ಗುಣವತಿ ನಾವೂರು, ಅವಿನಾಶ್ ದೇವರ ಮಜಲು, ಸುಂದರಗೌಡ ಆರೆಂಬಿ, ಚೆನ್ನಪ್ಪ ಗೌಡ ಕೇರ್ಪಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ದೇವಸ್ಥಾನದ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೆಂದು ನಿರ್ಣಯ ಮಾಡಲಾಯಿತು.