ಸೆ.26 ರಿಂದ ಅ.04: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಉತ್ಸವವು ಸೆ. 26
ರಿಂದ ಅ.04 ರವರೆಗೆ ನಡೆಯಲಿರುವುದು.

ಸೆ.26 ರಿಂದ ಪ್ರತಿದಿನ ಬೆಳಿಗ್ಗೆ 8.30 ಕ್ಕೆ, ಮಧ್ಯಾಹ್ನ 12.30 ಕ್ಕೆ ಮತ್ತು ರಾತ್ರಿ 8.30 ಕ್ಕೆ ಮಹಾಪೂಜೆ ನಡೆಯಲಿದೆ.
ಪ್ರತಿದಿನ ರಾತ್ರಿ 7 ಗಂಟೆಗೆ ದುರ್ಗಾದೇವಿ ಸನ್ನಿಧಿಯಲ್ಲಿ ದುರ್ಗಾಪೂಜೆ ನಡೆಯಲಿದೆ.
ಪ್ರತಿದಿನ ರಾತ್ರಿ ಗಂಟೆ 7.00 ರಿಂದ 8.30 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.04 ರಂದು ಮಂಗಳವಾರ ಆಯುಧ ಪೂಜೆ ಬೆಳಿಗ್ಗೆ ಗಂಟೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಜೆ ಗಂಟೆ 5.30 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಅ.05 ರಂದು ಬುಧವಾರ ವಿಜಯದಶಮಿ ನಡೆಯಲಿದೆ.
ವಿಜಯದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವವರು (ಅಕ್ಕಿ1 ಕೆ.ಜಿ, ತೆಂಗಿನಕಾಯಿ 1, ವೀಳ್ಯದೆಲೆ 5, ಅಡಿಕೆ 1, ಅರಸಿನ ಕೊಂಬು 1, ನಾಣ್ಯ 1) ಪೂರ್ವಾಹ್ನ ಗಂಟೆ 11-00 ಕ್ಕೆ ದೇವಸ್ಥಾನದಲ್ಲಿ ಹಾಜರಿರಬೇಕು.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here