ಸುನ್ನಿ ಜಮ್ಯತುಲ್ ಮುಅಲ್ಲಿಮೀನ್  ದ. ಕ. ಜಿಲ್ಲಾ ಈಸ್ಟ್ ಅಧ್ಯಕ್ಷರಾಗಿ ಸುಳ್ಯದ ಇಬ್ರಾಹಿಂ ಸಕಾಫಿ ಪುಂಡೂರು ಆಯ್ಕೆ

0

 

ಮ್ಯಾಗಝಿನ್ ಕಾರ್ಯದರ್ಶಿಯಾಗಿ ನಿಝರ್ ಸಕಾಫಿ ಸುಳ್ಯ

ದಕ್ಷಿಣ ಕನ್ನಡ ಜಿಲ್ಲಾ ಎಸ್ ಜೆ ಎಂ ಸುನ್ನಿ ಜಂಯೀಯತುಲ್ ಮುಅಲ್ಲಿಮೀನ್ ಈಸ್ಟ್ ಸಮಿತಿಯ 2022. 25 ನೇ ಸಾಲಿನ ಅಧ್ಯಕ್ಷರಾಗಿ ಸುಳ್ಯ ಗಾಂಧಿನಗರದ ಇಬ್ರಾಹಿಂ ಸಕಾಫಿ ಪುಂಡೂರು ಆಯ್ಕೆಯಾಗಿದ್ದಾರೆ.
ಇವರು ಗಾಂಧಿನಗರ ಮುನವಿರು ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಇದರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಾಲೂಕು ಮತ್ತು ಜಿಲ್ಲೆಗಳಲ್ಲಿ ವಿವಿಧ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಮ್ಯಾಗಝೀನ್ ವಿಭಾಗದ ಕಾರ್ಯದರ್ಶಿಯಾಗಿ ಗಾಂಧಿನಗರ ಮದರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ನಿಝರ್ ಸಕಾಫಿ ಮುಡೂರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎನ್ ಎಂ ಶರೀಫ್ ಸಕಾಫಿ ನೆಕ್ಕಿಲ್ , ಕೋಶಾಧಿಕಾರಿಯಾಗಿ ಕಾಸಿಂ ಸಕಾಫಿ ವಿಟ್ಲ ಆಯ್ಕೆಗೊಂಡಿದ್ದಾರೆ.
ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಬೆಳ್ಳಾರೆ ದಾರುಹುದಾ ತಂಬಿನಮಕ್ಕಿಯಲ್ಲಿ ನಡೆದ ಮಹಾಸಭೆಯಲ್ಲಿ ನಡೆಸಲಾಯಿತು.

LEAVE A REPLY

Please enter your comment!
Please enter your name here