ಸೆ.27- ಹರಿಹರ, ಸೆ.28-ದೇವಚಳ್ಳ ಸೆ.30-ಕೊಲ್ಲಮೊಗ್ರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

0

ಸೆ.27. ರಂದು ಹರಿಹರಪಲ್ಲತಡ್ಕ, ಸೆ.28 ರಂದು ದೇವಚಳ್ಳ, ಹಾಗೂ ಸೆ.30 ರಂದು ಕೊಲ್ಲಮೊಗ್ರ ಗ್ರಾಮ ಪಂಚಾಯತಗ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರವನ್ನು ಪಶುಪಾಲನಾ ಇಲಾಖೆ ಹಾಗೂ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಶು ಸಂಗೋಪನಾ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತೀನ್ ಪ್ರಭು ತಿಳಿಸಿದ್ದಾರೆ.

ಸೆ.27 ರಂದು ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ವಠಾರ, ಹರಿಹರ ಶ್ರೀರಾಮಕುಟ್ಟಿಯವರ ಮನೆ ಬಳಿ, ರೇಗನ್ ಶೆಟ್ಟಿಯವರ ಮನೆ ಬಳಿ, ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯ ಬಳಿ, ಬಸವನಗುಡಿ ವಠಾರ ಬಾಳುಗೋಡು, ಬೆಟ್ಟುಮಕ್ಕಿ ಮೈದಾನ ಬಳಿ ಬಾಳುಗೋಡುಗಳಲ್ಲಿ ಶಿಬಿರ ಆಯೋಜಿಸಲಾಗಿದೆ.

ಸೆ.28 ರಂದು ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಗಲ್ ಅಂಗನವಾಡಿ ಬಳಿ, ಕಂದ್ರಪ್ಪಾಡಿ ಶಾಲಾ ಬಳಿ, ದೇವ ಅಂಗನವಾಡಿ ಬಳಿ,ದೇವಚಳ್ಳ ಗ್ರಾ.ಪಂ. ವಠಾರ, ಸೇವಾಜೆ ಶಾಲೆ ಬಳಿ, ಎಲಿಮಲೆ ಪ್ರೌಢಶಾಲಾ ಬಳಿ ಶಿಬಿರ ಇರುತ್ತದೆ.

ಸೆ.30 ರಂದು ಕೊಲ್ಲಮೊಗ್ರ ಪಂಚಾಯತ್ ವ್ಯಾಪ್ತಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನ ಕಟ್ಟ ಗೋವಿಂದನಗರ, ಬೆಂಡೋಡಿ ಶಾಲಾ ಬಳಿ, ಪ್ರಾಥಮಿಕ ಪಶು ಚಿಕಿತ್ಸಾಲಯ ಕೊಲ್ಲಮೊಗ್ರ, ಗಡಿಕಲ್ಲು ಬಸ್ಸು ತಂಗುದಾಣ ಬಳಿ, ಹಾಲಿನ ಡೈರಿ ಕಲ್ಮಕಾರು, ಅಗಲಡ್ಕ ಬಳಿ ಲಸಿಕೆ ನೀಡಲಾಗುವುದು. ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಗ್ರಾ.ಪಂ. ಹಾಗೂ ಪಶು ಚಿಕಿತ್ಸಾಲಯವನ್ನು ಸಂಪರ್ಕ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here