ಸೆ.26: ಸುಳ್ಯ ಗಣೇಶ್ ಮ್ಯೂಸಿಕಲ್ಸ್ ರವರ ಪುತ್ತೂರು ಕಲಾ ಶಾಖೆಯ ವಾರ್ಷಿಕೋತ್ಸವ – ಕಲಾ ಪುರಸ್ಕಾರ, ರಸಮಂಜರಿ ಕಾರ್ಯಕ್ರಮ

0

 

ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಗಾಯಕ ಗಣೇಶ್ ಬಿ.ಎಸ್ ರವರ ಸಂಚಾಲಕತ್ವದ ಗಣೇಶ್ ಮ್ಯೂಸಿಕಲ್ಸ್ ನ ಪುತ್ತೂರು ಕಲಾ ತರಬೇತಿ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವವು ಸೆ.26 ರಂದು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿರುವುದು. ಮಧ್ಯಾಹ್ನ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಬಳಿಕ ಸಮಾರಂಭವು ಮುಳಿಯ ಕೇಶವ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಓಟೆ ಕೃಷ್ಣ ಭಟ್, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸವಣೂರು ಸೀತಾರಾಮ ರೈ ಉಪಸ್ಥಿತರಿರುವರು.
ಗಾಯಕ ಮಿಥುನ್ ರಾಜ್ ವಿದ್ಯಾಪುರ ಮತ್ತು ಗಾಯಕಿ ರಾಜೇಶ್ವರಿ ಯವರಿಗೆ ಕಲಾ ಪುರಸ್ಕಾರ ಪ್ರಶಸ್ತಿ ಪ್ರಧಾನ ನಡೆಯಲಿದೆ.
ತಾಲೂಕಿನ ಗಾಯಕ ಗಾಯಕಿಯರು ಹಾಗೂ ಕಲಾವಿದರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಗಣೇಶ್ ಸುಳ್ಯ ರವರು ತಿಳಿಸಿರುತ್ತಾರೆ.