ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಗೋಪಾಲ ಪೆರಾಜೆ

0

 

 

ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಗೋಪಾಲ ಪೆರಾಜೆ ಆಯ್ಕೆ ಆಗಿದ್ದಾರೆ.


ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ನವೀನ್ ಅಂಬೇಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನದಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಸಾಹಿತ್ಯಸಕ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಘಟಕದ ಗೌರವ ಕಾರ್ಯದರ್ಶಿಗಳನ್ನಾಗಿ ಶ್ರೀಮತಿ ಸಂಗೀತ ರವಿರಾಜ್ ಚೆಂಬು ಮತ್ತು ಜಗದೀಶ ಕುಂಬಳಚೇರಿ ಪೆರಾಜೆ ಆಯ್ಕೆಯಾದರು.

ಶ್ರೀಮತಿ ಟೀನಾ ಚರಣ್ ಸಂಪಾಜೆ ಅವರನ್ನು ಕೋಶಾಧಿಕಾರಿಯನ್ನಾಗಿ ನೇಮಿಸಲಾಯಿತು.

ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಘಟಕದ ಉದ್ದೇಶ ಮತ್ತು ಪ್ರಸ್ತುತೆಯ ಕುರಿತು ಮಾತನಾಡಿದರು.

ಕೊಡಗು ಜಿಲ್ಲಾ ಕ.ಸಾ. ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು “ಘಟಕವು ಈ ವಲಯದಲ್ಲಿ ಸಾಹಿತ್ಯಾಸಕ್ತರನ್ನು ಸೇರಿಸಿಕೊಂಡು ಕನ್ನಡದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಬೇಕು” ಎಂದರು.

ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ನವೀನ್ ಅಂಬೆಕಲ್ಲು ಅವರು “ಘಟಕವು ಕ.ಸಾ.ಪ. ನಿಯಮಾನುಸಾರ ಪೂರ್ಣ ಪ್ರಮಾಣದಲ್ಲಿ ಪದಾಧಿಕಾರಿಗಳನ್ನು ನೇಮಿಸಿಕೊಂಡು ಹೆಚ್ಚು ಹೆಚ್ಚು ಕನ್ನಡದ ಸಾಹಿತ್ಯ ಕಾರ್ಯಕ್ರಮಗಳ ಹಮ್ಮಿ ಕೊಳ್ಳುವಂತಾಗಬೇಕು” ಎಂದರು.
ಸಭೆಯಲ್ಲಿ ಲೋಕನಾಥ ಅಮಚೂರು, ಶ್ರೀಮತಿ ಇಂದಿರಾ ದೇವಿಪ್ರಸಾದ್ ಸಂಪಾಜೆ, ಕೊಡಗು ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್, ಜಿಲ್ಲಾ ನಿರ್ದೇಶಕರಾದ ಪ್ರೇಮ್ ಕುಮಾರ್, ಅಂಬೆಕಲ್ಲು ಕುಶಾಲಪ್ಪ, ಡಾ. ಯೋಗಿಶ್ ಬಿ.ಎಸ್., ಮಂಜುನಾಥ ವಿ.ಟಿ. ಶ್ರೀಧರ್ ಹೂವಲ್ಲಿ ಮತ್ತು ಸಂಪಾಜೆ ವಲಯ ಸಾಹಿತ್ಯಾಸಕ್ತರು ಹಾಜರಿದ್ದರು. ಮಡಿಕೇರಿ ಕಸಾಪ ಗೌರವ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿ ವಂದಿಸಿದರು.