ನೇಹಲ್ ಕುದ್ಕುಳಿಗೆ ರಾಜ್ಯ ಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

0

ಕರ್ನಾಟಕ ರಾಜ್ಯಮಟ್ಟದ ಇಂಡಿಪೆಂಡೆನ್ಸ್ ಕಪ್ ಕರಾಟೆ ಸ್ಪರ್ಧೆಯು ಮಂಗಳೂರಿನ ಸುರತ್ಕಲ್ ನಲ್ಲಿ ನಡೆಯಿತು.
12 ವರ್ಷ ವಯೋಮಾನದ ಒಳಗಿನ ಬಾಲಕರ ಕುಮಿಟೆ ವಿಭಾಗದಲ್ಲಿ ನೇಹಲ್ ಜಿ. ಕುದ್ಕುಳಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ಈಕೆ ಕಟ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಟೀಮ್ ಕಟ ವಿಭಾಗದಲ್ಲಿಯೂ ತೃತೀಯ ಸ್ಥಾನ ಗಳಿಸಿರುತ್ತಾರೆ.
ಈಕೆ ಕನಕಮಜಲು ಗ್ರಾಮದ ಕುದ್ಕುಳಿ ಗಣೇಶ್ ಹಾಗೂ ಶ್ರೀಮತಿ ಕವಿತಾ ಕುದ್ಕುಳಿ ದಂಪತಿಗಳ ಸುಪುತ್ರ. ಕರಾಟೆ ಶಿಕ್ಷಕರಾದ ಚಂದ್ರಶೇಖರ ಕುದ್ಕುಳಿ ಅವರು ತರಬೇತಿಯನ್ನು ನೀಡಿರುತ್ತಾರೆ.