ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಪಂಚಾಯತ್

0

 

ತ್ಯಾಜ್ಯ ಎಸೆದವರಿಂದಲೇ ವಿಲೇವಾರಿಗೊಳಿಸಿದ ಪಿ.ಡಿ.ಒ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ರೂ 5000.00 ದಂಡ ವಿಧಿಸಿದ ಘಟನೆ ಸೆ.23 ರಂದು ನಡೆದಿದೆ.


ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಸೆ.22 ರಂದು ಬೇಂಗಮಲೆ ಪರಿಸರಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಹಾಗೂ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ ತ್ಯಾಜ್ಯ ಬಿಸಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ರೂ 5000.00 ದಂಡ ವಿಧಿಸಲಾಯಿತು.
ಬಳಿಕ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತು.

LEAVE A REPLY

Please enter your comment!
Please enter your name here