ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಮಹಾ ಸಭೆ – ಪ್ರತಿಭಾ ಪುರಸ್ಕಾರ, ಆರೋಗ್ಯ ನಿಧಿ ವಿತರಣೆ

0

 

ನೂತನ ಪದಾಧಿಕಾರಿಗಳು: ಅಧ್ಯಕ್ಷ-ಚಂದ್ರಶೇಖರ ಯು,ಕಾರ್ಯದರ್ಶಿ- ಸುರೇಶ್ ಕೆ, ಖಜಾಂಜಿ- ಗೋಪಾಲಕೃಷ್ಣ ಎಂ.

ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭೆಯು ಸೆ. 18 ರಂದು ಹೋಟೆಲ್ ದ್ವಾರಕಾ ಸಭಾ ಭವನದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗನ್ ಬಾಜಿರ್ತೊಟ್ಟಿ, ಶಂಕರ ಪಾಟಾಳಿ ಪರಿವಾರಕಾನ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ ವರದಿ ವಾಚಿಸಿದರು. ದ್ವಿತೀಯ ಪಿ.ಯು.ಸಿ ಮತ್ತು ಎಸ್ ಎಸ್.ಎಸ್. ಎಲ್. ಸಿ. ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿಧ್ಯಾರ್ಥಿಗಳಿಗೆ ವಿಧ್ಯಾನಿಧಿಯನ್ನು ನೀಡಿ ಪುರಸ್ಕರಿಸಲಾಯಿತು. ಅನಾರೋಗ್ಯಕ್ಕೆ ಪೀಡಿತ ರಿಗೆ ಆರೋಗ್ಯ ನಿಧಿ ನಗದು ಸಹಾಯ ವಿತರಿಸಲಾಯಿತು.

2022 -23ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ , ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ , ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು , ಉಪಾಧ್ಯಕ್ಷೆ ಪೂರ್ಣಿಮಾ ಸೂಂತೋಡು,ಜತೆ ಕಾರ್ಯದರ್ಶಿ ಪ್ರವೀಣ್ ಜಯನಗರ, ಸದಸ್ಯರುಗಳಾಗಿ ಸೀತಾರಾಮ ಕರ್ಲಪ್ಪಾಡಿ,ಅನುರಾಧಾ ಜಾಲ್ಸೂರು, ರಾಧಾಕೃಷ್ಣ ಬೇರ್ಪಡ್ಕ ,ನಾರಾಯಣ ಬಂಟ್ರಬೈಲು,ಶಿವಪ್ರಸಾದ್ ಪೇರಾಲು, ಪ್ರದೀಪ್ ಪೆರಾಜೆ, ಪುಷ್ಪಲತಾ ಬೆಟ್ಟಂಪಾಡಿ, ಜಗದೀಶ್ ಮಠ,ಉದಯರವಿ ಕಲ್ಚಾರು, ವಿಜಯ ಎರ್ಮೇಟ್ಟಿ ಯವರನ್ನು ಆಯ್ಕೆ ಮಾಡಲಾಯಿತು. ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಾಲಿಂಗನ್ ಬಾಜಿರ್ತೊಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ನಾರಾಯಣ ಪಾಟಾಳಿ ಕೆ ಯವರನ್ನು ನೇಮಿಸಲಾಯಿತು. ಶಂಕರ ಪಾಟಾಳಿ ಪರಿವಾರಕಾನ,ವೆಂಕಟ್ರಮಣ ಬೇರ್ಪಡ್ಕ, ಚಂದ ಕುಡೆಕಲ್ಲು ಇವರನ್ನು ಗೌರವ ಸಲಹೆಗಾರರಾಗಿ ನೇಮಿಸಲಾಯಿತು.
ಬೈಲುವಾರು ಸಮಿತಿ ಮತ್ತು ಮಹಿಳಾ ಸಮಿತಿಯನ್ನು ರಚಿಸಲಾಯಿತು. ಬೈಲುವಾರು ಸಮಿತಿ ಪ್ರಧಾನ ಸಂಚಾಲಕ ರಮೇಶ್ ಇರಂತಮಜಲು, ಮಹಿಳಾ ಸಮಿತಿ ಪ್ರಧಾನ ಸಂಚಾಲಕಿ ಅನುತಾ ಸುರೇಶ್ ಕರ್ಲಪ್ಪಾಡಿ, ಸಹ ಸಂಚಾಲಕಿ ಪ್ರೇಮಾ ಚಂದ ಕುಡೆಕಲ್ಲು ರವರನ್ನು ಆಯ್ಕೆ ಮಾಡಲಾಯಿತು. ಬೈಲುವಾರು ಸಮಿತಿ ಸಂಯೋಜಕರುಗಳಾಗಿ ಶಂಕರ ಬಡ್ಡಡ್ಕ, ಸಚಿತ್ ಕಲ್ಮಡ್ಕ, ಗಣೇಶ್ ಪರ್ಲಿಕಜೆ, ರವಿರಾಜ್ ಕರ್ಲಪ್ಪಾಡಿ, ರಾಧಾಕೃಷ್ಣ ಅಂಬ್ರೋಟಿ, ಮಾಧವ ಬೆಟ್ಟಂಪಾಡಿ, ನವೀನ್ ಬಿಳಿಯಾರು, ಜನಾರ್ಧನ ನೀರಬಿದಿರೆ, ನಿತೀಶ್ ಎರ್ಮೇಟ್ಟಿ, ಶಶಿಧರ ನೆಲ್ಲಿಕುಂಜೆ, ದಾಮೋದರ ಅಡ್ಕಾರು, ಅನುಪಮಾ ಜಾಲ್ಸೂರು, ಗೋಪಾಲಕೃಷ್ಣ ಕೊಲ್ಲಮೊಗ್ರ, ಕೃಷ್ಣ ಹೊಸೂರು, ಸಹ ಸಂಯೋಜಕರಾಗಿ ವಿನೋದ್ ರಾಜ್ , ಸುನಿಲ್ ಶಾಂತಿಮಜಲು, ಸನತ್ ಕಾಂತಮಂಗಲ,ನಾರಾಯಣ ಎಸ್. ಯಂ, ಉಮೇಶ್ ಸರಳಿಕುಂಜ, ವಿಜಯ ಕುಮಾರ್ ಬಡ್ಡಡ್ಕ, ರವಿ ಉಬರಡ್ಕ, ಪ್ರದೀಪ್ ಹುಳಿಯಡ್ಕ, ನಾರಾಯಣ ಸಂಕೇಶ, ಅಶ್ವಿತ್ ಅಡ್ಕಾರ್, ಅಂಬಿಕಾ ಜಾಲ್ಸೂರು, ಗಿರಿಧರ ಗುತ್ತಿಗಾರು, ಮಹಿಳಾ ಸಮಿತಿ ಸಂಯೋಜಕಿಯರಾಗಿ ಜಯಂತಿ ಕರ್ಲಪ್ಪಾಡಿ, ಸವಿತಾ ಉಬರಡ್ಕ, ಸರಸ್ವತಿ ಐವರ್ನಾಡು, ನಾಗವೇಣಿ ಚಂದ್ರ ಸುಳ್ಯ, ಶಾರದಾ ಪಳ್ಳತ್ತಡ್ಕ, ವಿಶಾಲಾಕ್ಷಿ ಮೊರಂಗಲ್ಲು, ಸತ್ಯ ಗಣೇಶ್ ಅಂಬಟೆಡ್ಕ, ಲತಾಸೂಂತೋಡು,ವಿಶಾಲಾಕರ್ಲಪ್ಪಾಡಿ,ದಮಯಂತಿ ಕರ್ಲಪ್ಪಾಡಿ, ಶೀಲಾವತಿ ಅಡ್ಕಾರು, ನಯನಾ ಸುರೇಶ್ ಕಾಟಿಪಳ್ಳ, ನಿಶ್ಮಿತಾ ಕಾಂತಮಂಗಲ, ಮಧುಶ್ರೀ ಅರಂಬೂರು, ಸೌಮ್ಯ ಅರಂಬೂರು, ಸೌಮ್ಯಾ ರಮೇಶ್ ಇರಂತಮಜಲು, ಚಂದ್ರಿಕಾ ಲೋಕೇಶ್ ಇರಂತಮಜಲು, ಸರೋಜಿನಿ ಪೈಲಾರು, ಪ್ರೇಮಲತಾ ಉಬರಡ್ಕ ರವರನ್ನುಆಯ್ಕೆ ಮಾಡಲಾಯಿತು.
ಕು.ಧನ್ವಿ , ಕು.ಸಾನ್ವಿ ಪ್ರಾರ್ಥಿಸಿದರು. ನಾರಾಯಣ ಬಂಟ್ರಬೈಲು ಸ್ವಾಗತಿಸಿ, ರಮೇಶ್ ಇರಂತಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.