ಕೊಲ್ಲಮೊಗ್ರು : ಕೆ ವಿ ಜಿ ಅನುದಾನಿತ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

0

 

ಕೆ ವಿ ಜಿ ಅನುದಾನಿತ ಪ್ರೌಢ ಶಾಲೆ ಕೊಲ್ಲಮೊಗ್ರು ಇಲ್ಲಿ ಸೆ.23ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಸುಳ್ಯ ಇದರ ಸಹಯೋಗದಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಲೆಯ ಸಹ ಶಿಕ್ಷಕರಾದ ವೆಂಕಟ್ರಮಣ ಕೆ ಕೆ ರವರು ವಹಿಸಿದ್ದರು.

 

ಸುಬ್ರಮಣ್ಯ ವಲಯದ ಮೇಲ್ವಿಚಾರಕರರಾದ ರಾಜೇಶ್ ವೇದಿಕೆಯಲ್ಲಿದ್ದರು. ಜನಜಾಗೃತಿ ವೇದಿಕೆ ಸುಳ್ಯ ಇದರ ಸದಸ್ಯರಾದ ವಿಜಯ್ ಕುಮಾರ್ ಚಾರ್ಮತ ನಡುಗಲ್ಲು ಇವರು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಸಂಘದ ಸೇವಾಪ್ರತಿನಿಧಿ ಪದ್ಮಾವತಿ ಆರ್ ಕೆ ರವರು ವೇದಿಕೆಯಲ್ಲಿ ಸರ್ವರನ್ನು ಸ್ವಾಗತಿಸಿದರು. ಶಾಲೆಯ ಸಹಶಿಕ್ಷಕ ಲೋಕನಾಥ ಗೌಡ ಪಿ ವಂದನಾರ್ಪಣೆ ಮಾಡಿದರು.
ವಿದ್ಯಾರ್ಥಿಗಳು ಮತ್ತು ಸಹಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here