ನೆಟ್ಟಾರು ಹಾಲು ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ

0

ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ. ೧೯ರಂದು ನಡೆಯಿತು.
ಲಕ್ಷ್ಮೀನಾರಾಯಣ ಶ್ಯಾನ್‌ಭೋಗ್‌ರವರು ಅಧ್ಯಕ್ಷತೆ ವಹಿಸಿದ್ದು, ಲಾಭಾಂಶ ಘೋಷಣೆ ಮಾಡಿದರು. ಒಟ್ಟು ೭೫೫೦೮.೬೩ ಲಾಭ ಗಳಿಸಿದ್ದು, ಸದಸ್ಯರಿಗೆ ೬೫% ಬೋನಸ್, ಪ್ರತೀ ಲೀಟರ್‌ಗೆ ೦.೪೭ ಪೈಸೆ ನೀಡಲಾಗುವುದು. ಶೇ. ೧೦ ಡಿವಿಡೆಂಟ್ ವಿತರಿಸಲಾಗುವುದು ಎಂದು ಹೇಳಿದರು.


ಕಾರ್ಯದರ್ಶಿ ಚಂದ್ರಶೇಖರ ಗೌಡ ವರದಿ ವಾಚಿಸಿ, ಆಯವ್ಯಯ ಮಂಡನೆ ಮಾಡಿದರು.
ಸಂಘದಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ಲೋಕೇಶ್ ಪೂಜಾರಿ ಕೆ.ಎಸ್., ಮಮತ ಡಿ.ಆಳ್ವ, ಲಕ್ಷ್ಮೀನಾರಾಯಣ ಶ್ಯಾನ್‌ಭೋಗ್‌ರವರಿಗೆ, ಗುಣಮಟ್ಟ ಹಾಲು ಪೂರೈಸಿದ ವಸಂತ ಎನ್., ಶಾರದಾ ಆರ್.ಭಟ್, ಮಹಾಬಲ ಪೂಜಾರಿಯವರಿಗೆ ಬಹುಮಾನ ವಿತರಿಸಲಾಯಿತು.
೨೦೨೧-೨೨ರಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ, ಭಾಸ್ಕರ ಎನ್., ಸುಬ್ರಹ್ಮಣ್ಯ ಭಟ್, ಶ್ರೀಮತಿ ಉಮಾದೇವಿ, ಶ್ರೀಮತಿ ಶಾರದಾ, ಲೋಕೇಶ್ ಪೂಜಾರಿ, ಮಹಾಬಲ ಪೂಜಾರಿ, ಕುಶಾಲಪ್ಪ ಎನ್. ಕಿರಣ್ ಶೆಟ್ಟಿ, ಸಿಬ್ಬಂದಿ ವರ್ಗದವರಾದ ಚಂದ್ರಶೇಖರ ಗೌಡ, ಹಾಲು ಪರೀಕ್ಷಕಿ ಶ್ರೀಮತಿ ಜಯಂತಿ ರೈ, ಕಿಶೋರ್ ಕುಮಾರ್ ಇದ್ದರು.
ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಕೆ. ಲೆಕ್ಕ ಪರಿಶೋಧನೆ ಮಂಡಿಸಿದರು. ಕು. ಮನಸ್ವಿ, ಕು.ಸಾನಿಧ್ಯ, ಕು.ಶ್ರಾವ್ಯ ಪ್ರಾರ್ಥಿಸಿದರು. ನಿರ್ದೇಶಕ ವಸಂತ ಎನ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಬಿ. ಪರಮೇಶ್ವರ ಭಟ್ ವಂದಿಸಿದರು.