ಗುತ್ತಿಗಾರು ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್  ವತಿಯಿಂದ ಕ್ರೀಡಾ ತರಬೇತಿ ಆರಂಭ

0

 

ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ಸೆ.18 ರಿಂದ ಆರಂಭಗೊಂಡಿದೆ.

ಈ ತರಬೇತಿಯಲ್ಲಿ ಮಕ್ಕಳಿಗೆ ಅಥ್ಲೆಟಿಕ್ಸ್ ಮತ್ತು ಕಬಡ್ಡಿ ಹಾಗೂ ವಾಲಿಬಾಲ್ ಆಟಗಳ ಕೌಶಲ್ಯಗಳ ತರಬೇತಿ ನಡೆಯುತ್ತಿದೆ. ಮಾಯಿಲ್ಲಪ್ಪ ಕೊಂಬೆಟ್ಟು ಮತ್ತು ಅನಿಲ್ ಮೆಟ್ಟಿನಡ್ಕ ಅವರ ನೇತೃತ್ವದಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದು ಗುತ್ತಿಗಾರು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತರಬೇತಿ ನಡೆಯುತಿದ್ದು ಹಲವಾರು ಮಂದಿ ವಿದ್ಯಾರ್ಥಿಗಳು ಉಚಿತ ತರಬೇತಿ ಪಡೆಯುತಿದ್ದಾರೆ.