ಅಚ್ರಪ್ಪಾಡಿ ಶಾಲೆಯಲ್ಲಿ ಅಡಿಕೆ ತೋಟಕ್ಕೆ ಚಾಲನೆ

0

 

ಅಚ್ಚಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಡಿಕೆ ತೋಟ ರಚಿಸುವ ಯೋಜನೆಗೆ ಸೆ. 23ರಂದು ಚಾಲನೆ ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ, ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ವಸಂತ ಬೊಳ್ಳಾಜೆ, ಗೌರವಾಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಉಪಾಧ್ಯಕ್ಷ ಹೊನ್ನಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶಿವಪ್ರಕಾಶ್ ಕಡಪಳ, ಶಾಲಾ ತರಕಾರಿ ಮತ್ತು ಅಡಿಕೆ ತೋಟ ನಿರ್ವಹಣಾ ಸಮಿತಿಯ ಅಧ್ಯಕ್ಷ ಧರ್ಮಪಾಲ ಅಡ್ಡನಪಾರೆ ಹಾಗೂ ಶಾಲಾ ನಾಯಕಿ ಕು. ಚಂದನ್ ಡಿ ದೀಪಾ ಪ್ರಜ್ವಲಿಸಿ ಅಡಿಕೆ ಸಸಿಗಳನ್ನು ನೆಡಲು ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹರೀಶ ಕಡಪಳ ಹಾಗೂ ಶಾಲಾ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ತಲಾ 125 ರಂತೆ 250 ಅಡಿಕೆ ಸಸಿಗಳನ್ನು ನೀಡಿ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕಿಯವರ ಪತಿ ವೇಣುಗೋಪಾಲ ಪಡೀಲ್ ಅಡಿಕೆ ಸಸಿಗಳಿಗೆ ಸುಮಾರು ಹತ್ತು ಸಾವಿರ ಮೌಲ್ಯದ ಸಾವಯವ ಗೊಬ್ಬರವನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ್ ಅಚ್ರಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಮಚಂದ್ರ, ತಾಯಂದಿರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪರಶುರಾಮ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಂದರಿ, ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಪೋಷಕರು, ಊರವರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಖಿಲ್ ಅಚ್ರಪ್ಪಾಡಿ ಉಪಹಾರದ ವ್ಯವಸ್ಥೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.