ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

 

ಒಟ್ಟು ವ್ಯವಹಾರ 3,26,48,489, ನಿವ್ವಳ ಲಾಭ 4,78,083

ಡಿವಿಡೆಂಡ್ 25% ಘೋಷಣೆ

ಕುಕ್ಕುಜಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘದ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.22 ರಂದು ಸಂಘದ ಸಹಸ್ತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ತಿರುಮಲೇಶ್ವರ ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ 297 ಮಂದಿ ಸದಸ್ಯರನ್ನು ಹೊಂದಿದೆ. ಪಾಲು ಬಂಡವಾಳ 1,12 ಲಕ್ಷ ಜಮೆ ಇರುತ್ತದೆ. ವರದಿ ವರ್ಷದಲ್ಲಿ 2,02,702 ಲೀಟರ್ ಹಾಲು ಖರೀದಿ ಮಾಡಿದ್ದು ರೂ. 60,29 ಲಕ್ಷ ಪಾವತಿಯಾಗಿದೆ. ಒಕ್ಕೂಟಕ್ಕೆ ರೂ.58,77 ಲಕ್ಷ ಹಾಗೂ ಸ್ಥಳೀಯ ವಾಗಿ ರೂ.8,67 ಲಕ್ಷ ಜುಮ್ಲಾ ರೂ. 67,44ಲಕ್ಷ ಮೌಲ್ಯದ ಹಾಲು ಮಾರಾಟವಾಗಿರುತ್ತದೆ. ರೂ.27,84 ಲಕ್ಷದ ಪಶು ಆಹಾರ ಹಾಗೂ ಲವಣ ಮಿಶ್ರಣವನ್ನು ವರದಿ ಸಾಲಿನಲ್ಲಿ ಮಾರಾಟ ಮಾಡಲಾಗಿದ್ದು ವರ್ಷಾಂತ್ಯಕ್ಕೆ ರೂ.54,210 ಸಾವಿರ ಮೌಲ್ಯದ ಪಶು ಆಹಾರ ಗೋದಿ ಬೂಸ ಮತ್ತು ಲವಣ ಮಿಶ್ರಣ ಅಂತಿಮ ದಾಸ್ತಾನಿರುತ್ತದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಒಟ್ಟು ರೂ.86,757 ಸಾವಿರ ಠೇವಣಾತಿ ಇರುವುದು. 2021-22 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪ್ರಕಾರ ಒಟ್ಟು ವ್ಯವಹಾರ ರೂ.3,26 ಕೋಟಿ ,ನಿವ್ವಳ ಲಾಭ 4,78 ಲಕ್ಷ ಗಳಿಸಿರುತ್ತದೆ. ಸಂಘದ ಸದಸ್ಯರಿಗೆ ಶೇ.25 ರಂತೆ ಡಿವಿಡೆಂಡ್ ನೀಡುವುದಾಗಿ ಅದ್ಯಕ್ಷರು ಘೋಷಿಸಿದರು.


ಮುಂದಿನ ಯೋಜನೆಗಳು ಸಂಘದ ಸಹಸ್ತ ಕಟ್ಟಡ ದುರಸ್ತಿ ಕಾರ್ಯ ಹಾಗೂ ಕಿಟಕಿಗಳ ಅಳವಡಿಕೆ ಹಾಗೂ ಹಾಲಿನ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟದ ವೃದ್ಧಿ ಪಡಿಸುವ ಕುರಿತು ಯೋಜನೆ ಹಮ್ಮಿಕೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ಸಿಬ್ಬಂದಿ ಭವಿಷ್ಯ ನಿಧಿಯನ್ನು ಸಿಬ್ಬಂದಿ ಭದ್ರತೆಯ ಹಿತದೃಷ್ಟಿಯಿಂದ ಪ್ರತ್ಯೇಕ ಠೇವಣಾತಿ ಇರಿಸಬೇಕು. ಸಂಘದ ಜಮಾ ಖಾತೆಯಲ್ಲಿ ಇಡಬಾರದು.
ಕಟ್ಟಡ ದುರಸ್ತಿ ಪಡಿಸುವ ಯೋಜನೆ ಒಳ್ಳೆಯ ವಿಚಾರ. ಅಂದಾಜು ಎಸ್ಟಿಮೇಟ್ ತಯಾರಿಸಿ ಮಹಾಸಭೆಯಲ್ಲಿ ತಿಳಿಸಬೇಕು. ಸಂಘದ ಕಟ್ಟಡದ ಗೋಡೆಯಲ್ಲಿ ಕೆ.ಎಂ.ಎಫ್ ನವರು ಜಾಹೀರಾತು ಬರೆದಿದ್ದಾರೆ. ಶುಲ್ಕ ವಿಧಿಸಿದ್ದೀರಾ?
ಜಾಹೀರಾತಿಗಾಗಿ ಕೋಟಿ ಖರ್ಚು ಮಾಡುತ್ತಾರೆ. ಸಂಘದ ಕಟ್ಟಡ ದುರಸ್ತಿಗೆ ಸಹಕಾರ ನೀಡಲಿ. ಇಲ್ಲದಿದ್ದರೆ ಸುಣ್ಣ ಬಳಿದು ಅಳಿಸಿ ಹಾಕಿ. ನಾವು ಕೊಡುವ ಹಾಲಿನಲ್ಲಿ ಕೆ.ಎಂ.ಎಫ್ ನವರು 15 ರೂ ಲಾಭ ಪಡೆಯುತ್ತಾರೆ. ಪಶು ಸಂಗೋಪನೆ ಇಲಾಖೆ ಮತ್ತು ಕೆ.ಎಂ.ಎಫ್ ನಿಂದ
ಒಬ್ಬ ಪ್ರತಿನಿಧಿ ಕಡ್ಡಾಯವಾಗಿ ಮಹಾಸಭೆ ಗೆ ಹಾಜರಿರಬೇಕು ಈ ಬಗ್ಗೆ ನಿರ್ಣಯ ಮಾಡಿ.
ಸಂಘದ ಕಟ್ಟಡ ಕೋಣೆಯನ್ನು ಬಾಡಿಗೆ ನೀಡಲಾಗಿದೆ. ಯಾವ ರೀತಿ ಒಪ್ಪಂದ ಮಾಡಲಾಗಿದೆ. ಏಲಂ ಪ್ರಕ್ರಿಯೆ ಮಾಡಬೇಕು. ಪತ್ರಿಕೆ ಮೂಲಕ ಪ್ರಕಟಣೆ ನೀಡಿ ಸದಸ್ಯರಿಗೆ ಪ್ರಥಮ ಆದ್ಯತೆಯಲ್ಲಿ ಏಲಂ ನಡೆಸಬೇಕು ಎಂದು ಎಂ.ಜಿ.ಸತ್ಯನಾರಾಯಣ ರವರು ಒತ್ತಾಯಿಸಿದರು.
ಇನ್ಸೂರೆನ್ಸ್ ಪ್ರತಿ ನಮ್ಮ ಕೈಗೆ ಸಿಗುತ್ತಿಲ್ಲಾ ಯಾಕೆ ?
ಸಿಬ್ಬಂದಿ ವೇತನವನ್ನು ಪರಿಷ್ಕರಿಸಿ ಹೆಚ್ಚಿಸುವ ಕುರಿತು ಯೋಗಿಶ ಮಾಡಬಾಕಿಲು ಪ್ರಸ್ತಾಪಿಸಿದರು.
ಈಗಾಗಲೇ ಸಂಘದ ಆದಾಯದಲ್ಲಿ ಪ್ರಮಾಣ ಕಡಿಮೆ ಇರುವುದರಿಂದ ವೇತನ ಪರಿಷ್ಕರಿಸಿದರೆ ನಷ್ಟವಾಗುವ ಸಾಧ್ಯತೆ ಇದೆ. ಕಟ್ಟಡ ದುರಸ್ತಿ ಕಾರ್ಯ ಮುಗಿಸಿ ಮುಂದಿನ ಹಂತದಲ್ಲಿ ಪರಿಷ್ಕರಿಸಿ ಏರಿಕೆ ಮಾಡಿವ ನಿರ್ಣಯ ಸಂಘ ದ ಹಿತದೃಷ್ಟಿಯಿಂದ ಉತ್ತಮ ಎಂದು ನಿವೃತ್ತ ಕಾರ್ಯದರ್ಶಿ ವಾಸುದೇವ. ಮಾಡಬಾಕಿಲು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಬಾರಿ ಮಹಾಸಭೆಯ ಖರ್ಚು ದುಪ್ಪಟ್ಟು ಹೆಚ್ಚುವರಿ ಯಾಗಿದೆ ಕಾರಣವೇನು? ಕಟ್ಟಡ ದುರಸ್ತಿ ಪಡಿಸುವ ಬಗ್ಗೆ ಎಸ್ಟಿಮೇಟ್ ಪ್ರತಿ ಮಾಡಿದ್ದೀರಾ ? ರಿಸರ್ವ್ ಫಂಡ್ ನಿಂದ ಬಜೆಟ್ ಇರಿಸಿಕೊಳ್ಳಲು ಸಾಧ್ಯವೇ ಎಂದು ಕೃಷ್ಣಪ್ಪ ಕೋಡ್ತುಗುಳಿ ಪ್ರಶ್ನಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಯತೀಶ್ ಹಿರಿಯಡ್ಕ, ನಿರ್ದೇಶಕರಾದ ರಾಮಕೃಷ್ಣ ಕಂಜರ್ಪಣೆ, ಯನ್. ನಾರಾಯಣ ಭಟ್, ಪಿ.ಲಿಂಗಪ್ಪ ಗೌಡ, ಬಿ.ಸುಬ್ರಾಯ ಗೌಡ, ಐ.ವೆಂಕಟ್ರಮಣ ಗೌಡ, ಹುಕ್ರ ಮುಗೇರ, ‌ಬಿ.ಯಶೋಧ, ಹೆಚ್. ಕೆ.ಮೀನಾಕ್ಷಿ, ಯಮುನಾ ಬಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಯೋಗೀಶ ಕೆ ವರದಿ ಮಂಡಿಸಿದರು. ಹೆಚ್.ಕೆ.ಮೀನಾಕ್ಷಿ ಪ್ರಾರ್ಥಿಸಿದರು. ತಿರುಮಲೇಶ್ವರ ಕೆ ಸ್ವಾಗತಿಸಿದರು. ಯತೀಶ್ ಹಿರಿಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here