ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ವಿದ್ಯಾರ್ಥಿಗಳ ತಂಡ ರಚನೆಗಾಗಿ ಆಯ್ಕೆ ಶಿಬಿರ ಆರಂಭ

0

 

ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ವಿದ್ಯಾರ್ಥಿಗಳ ವಾಲಿಬಾಲ್ ತಂಡ ರಚನೆಗೆ ನಿರ್ಧರಿಸಲಾಗಿದ್ದು ಅದಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ಶಿಬಿರ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ಇಂದು ಆರಂಭಗೊಂಡಿದೆ.

14 ರ ವಯೋಮಿತಿ, 16 ರ ವಯೋಮಿತಿ ಮತ್ತು 18 ರ ವಯೋಮಿತಿಯ ಒಟ್ಟು ಆರು ತಾಲೂಕು ಮಟ್ಟದ ತಂಡಗಳನ್ನು ಶಿಬಿರದಲ್ಲಿ ಆಯ್ಕೆ ಮಾಡಲಾಗುವುದು.


ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ।ಫಾ।ವಿಕ್ಟರ್ ಡಿಸೋಜರವರು ಶಿಬಿರಕ್ಕೆ ಶುಭಹಾರೈಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಆಯ್ಕೆಯ ನಿಯಮಗಳನ್ನು ಹೇಳಿದರು.


ವಾಲಿಬಾಲ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಉಪಾಧ್ಯಕ್ಷ ಅಬ್ದುಲ್ ರಜಾಕ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ವನಿತಾ ರಂಗತ್ತಮಲೆ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ವಸಂತ, ಇತರ ಪದಾಧಿಕಾರಿಗಳು, ವಾಲಿಬಾಲ್ ತೀರ್ಪುಗಾರ ಮಂಡಳಿ ಸಂಚಾಲಕ ಕೊರಗಪ್ಪ ಕುರುಂಬುಡೇಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here