ನಿವೃತ್ತ ಮುಖ್ಯ ಶಿಕ್ಷಕಿ ದಿ.ಬಿ.ಕೆ. ಶಾರದಾಬಾಯಿ ನಾವಡರ ಸ್ಮರಣಾರ್ಥ

0

 

ಕಾಂತಮಂಗಲ ಶಾಲೆಯಲ್ಲಿ ನಿರ್ಮಿಸಲಾದ ನಲಿಕಲಿ ಕೊಠಡಿ ಹಸ್ತಾಂತರ

 

ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ದಿ.ಬಿ.ಕೆ. ಶಾರದಾಬಾಯಿ ನಾವಡರವರ ಸ್ಮರಣಾರ್ಥ ಅವರ ಪತಿ ಕೃಷ್ಣ ನಾವಡರು ಹಾಗೂ ಮಕ್ಕಳು ಕೊಡುಗೆಯಾಗಿ ನೀಡಿದ ನಲಿಕಲಿ ಕೊಠಡಿಯ ಹಸ್ತಾಂತರ ಕಾರ್ಯಕ್ರಮ ಸೆ.24 ರಂದು ನಡೆಯಿತು.
ಸುಬ್ರಹ್ಮಣ್ಯ ‌ಮಠದ ವಿದ್ಯಾಪ್ರಸನ್ನ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮ ವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಿದರು.

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾಂಕ್ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಶಿಕ್ಷಣ ಸಂಯೋಜಕರಾದ ಚಂದ್ರಶೇಖರ, ಶ್ರೀಮತಿ ನಳಿನಿ, ಸಮೂಹ ಸಂಪನ್ಮೂಲ ವ್ಯಕ್ತಿ ಭವಾನಿಶಂಕರ್ ಕೆ, ಕರ್ನಾಟಕ ಬ್ಯಾಂಕ್ ನ ನಿವೃತ್ತ ಎ.ಜಿ.ಎಂ. ವೆಂಕಟ್ರಾಜ್, ನಿವೃತ್ತ ಶಿಕ್ಷಣಾಧಿಕಾರಿ ಕಮಲಾಕರ ಹಾಲಂಬಿ, ವಿಶ್ರಾಂತ ಕೃಷಿ ಅಧಿಕಾರಿ ಪಿ.ಸುಬ್ಬರಾವ್, ಶ್ರೀಮತಿ ಸುಮಾ ಸುಬ್ಬರಾವ್ ದೊಡ್ಡತೋಟ,

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಂಜುಳಾ, ಶ್ರೀಮತಿ ನಾರಾಯಣಿ ಕಲ್ಲೂರಾಯ ಕಾಂತಾಜೆ ಕಾಂತಮಂಗಲ, ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ನಿವೃತ್ತ ಪ್ರಾಂಶುಪಾಲ ಜಿ. ಉಮ್ಮರ್, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ ಸ್ವಾಗತಿಸಿದರು.

LEAVE A REPLY

Please enter your comment!
Please enter your name here