ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

 

ರೂ. 434 ಕೋಟಿ ವ್ಯವಹಾರ

ರೂ.1.42 ಕೋಟಿ ಲಾಭಾಂಶ, ಶೇ.7 ಡಿವಿಡೆಂಟ್

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಇಂದು ಸಂಘದ “ದೀನ್ ದಯಾಳ್ ರೈತ ಸಭಾಭವನ” ದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಸಕ್ತ ಸಾಲಿನಲ್ಲಿ ಸಂಘವು
₹4,34,62,72,157.72 ವ್ಯವಹಾರ ಮಾಡಿದ್ದು ₹ 1,42,13,093 ಲಾಭಾಂಶ ಪಡೆದಿದೆ. ಶೇರ್ ದಾರರಿಗೆ, ಶೇ.7 ಡಿವಿಡೆಂಟ್ ಹಂಚುವುದಾಗಿ ಘೋಷಿಸಲಾಯಿತು. ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ ವರದಿ ವಾಚಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕಿಶೋರ್‍ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ, ಎ.ವಿ ತೀರ್ಥರಾಮ, ಕೇಶವ ಭಟ್ ಮುಳಿಯ, ಶ್ರೀಮತಿ ಮಂಜುಳಾ ಮುತ್ಲಾಜೆ, ರವಿಪ್ರಕಾಶ್ ಬಳ್ಳಕ್ಕ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ಶ್ರೀಮತಿ ಚಂದ್ರಾವತಿ ಮುಂಡೋಡಿ, ಕುಂಞ ಬಳ್ಳಕ್ಕ, ಆನಂದ ಹಲಸಿನಡ್ಕ ಉಪಸ್ಥಿತರಿದ್ದರು.


ಸಭೆಯಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎ.ವಿ ತೀರ್ಥರಾಮ, ಕೇಂದ್ರ ರಬ್ಬರ್ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಮುಳಿಯ ಕೇಶವ ಭಟ್, ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಯ್ಯ ಗೌಡ ಪರಮಲೆ ಮತ್ತು ಜಯಂತಿ ದಂಪತಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭ ಕ್ಯಾಂಪ್ಕೋ ಗೆ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ರತ್ನ ಎಂ ಮುಂಡೋಡಿ, ಕೊಕ್ಕೋ ಮಾರಾಟ ಮಾಡಿದ ವಿಭಾಗದಲ್ಲಿ ನಾಗಪ್ಪ ಗೌಡ, ತಿರುಮಲೇಶ್ವರ್ ಭಟ್ ಚಣಿಲ, ಕಮಲಾಕ್ಷ ಸಂಪ್ಯಾಡಿ, ಅತಿ ಹೆಚ್ಚು ರಸಗೊಬ್ಬರ ಖರೀದಿಗಾಗಿ ಮುಳಿಯ ಕೇಶವ ಭಟ್, ದಯಾನಂದ ಮುತ್ಲಾಜೆ, ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗಾಗಿ ಸೌರಭ ಟ್ರಾವೆಲ್ಸ್ ನ ಕುಮಾರ್, ಶ್ರೇಯಸ್ ಎಂ ಡಿ, ಹೆಚ್ಚು ದಿನಸಿ ಖರೀದಿಗಾಗಿ ಶಿವಪ್ರಕಾಶ್ ಕಡಪಳ, ಪದ್ಮನಾಭ ಕಾಜಿಮಡ್ಕ, ದಯಾನಂದ ಮುತ್ಲಾಜೆ , ಅತಿ ಹೆಚ್ಚು ದಿನಸಿ ಖರೀದಿ ಮಾಡಿದ ಸಂಸ್ಥೆಯ ಸಲುವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರವಾಗಿ ವ್ಯವಸ್ಥಾಪನ ಸಮಿತಿ ಸದಸ್ಯ ಚಂದ್ರಶೇಖರ ಬಾಳುಗೋಡು, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಪರವಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾ ರಾಮಣ್ಣಗೌಡ ಮತ್ತು ಲಿಂಗಪ್ಪ ಕಾಜಿಮಡ್ಕ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಸಂಪ್ಯಾಡಿ ಮತ್ತು ಶಂಕರ ನಾರಾಯಣ ಶರ್ಮ ಅವರನ್ನು ಅವರಿದ್ದ ಸ್ಥಳಕ್ಕೆ ಆಡಳಿತ ಮಂಡಳಿಯವರು ತೆರಳಿ ಗೌರವಿಸಿದರು.
ವೆಂಕಟ್ ದಂಬೆಕೋಡಿ ಸ್ವಾಗತಿಸಿ ಶರತ್ ಎ.ಕೆ ವಂದಿಸಿದರು. ಕಿಶೋರ್‍ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.