ಸುಳ್ಯ ತಾಲೂಕು ಪ್ರೌಢಶಾಲಾ ಭಾಷಾ ಶಿಕ್ಷಕರ ಸಮಾಲೋಚನ ಕಾರ್ಯಾಗಾರ

0

ಕರ್ನಾಟಕ ಸರಕಾರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಭಾಷಾ ಶಿಕ್ಷಕರ ಎರಡನೇ ಸಮಾಲೋಚನಾ ಕಾರ್ಯಾಗಾರ ಸೆ. 19  ರಂದು ನಡೆಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಇ.ಒ. ಮಹಾದೇವ ಎಸ್.ಪಿ. ರವರು ಕಲಿಕಾ ಚೇತರಿಕೆ ಕಾರ್ಯಾಗಾರದ ಕುರಿತಿ ಸಂಪೂರ್ಣ ಮಾಹಿತಿಯನ್ನು ನೀಡಿದರು ಹಾಗೂ ಶಿಕ್ಷಕರು ನಿರಂತರ ಕಲಿಕಾರ್ಥಿಯಾಗಿರಬೇಕು ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಕಲಿಕಾ ಚೇತರಿಕೆ ಕಾರ್ಯಾಗಾರದ ಬಗ್ಗೆ ಸವಿವರವಾಗಿ ತಿಳಿಸಿದರು. ಸಮಾಲೋಚನಾ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇದರ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಶಿಕ್ಷಕರು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವ ಎಂದು ಹೇಳಿ ಶಿಕ್ಷಕರಿಗೆ ಶುಭಹಾರೈಸಿದರು. ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ ಕೆ., ಶ್ರೀಮತಿ ಸಂಧ್ಯಾಕುಮಾರಿ ಬಿ.ಎಸ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಮ್ಯ, ಶಾಲಾ ಆಡಳಿತ ಮಂಡಳಿಯ ಖಜಾಂಜಿಯಾಗಿರುವ ಹರ್ಷವರ್ಧನ ಬೊಳ್ಳೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿಯವರು ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ಸಂಧ್ಯಾಕುಮಾರಿ ಒ. ವಂದಿಸಿದರು. ಸಹಶಿಕ್ಷಕ ಹರಿಪ್ರಸಾದ ಕೆ. ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಗಳಾದ ರಚಿತಾ ಎಂ ಪಿ, ಶ್ರೀಹಸ್ತಾ ಕೆ ಎಸ್, ರೇಷ್ಮಾ ಪಿ, ಹರ್ಷಿತಾ ಕೆ, ದೀಪ್ತಿ ಪಿ ಪ್ರಾರ್ಥಸಿದರು.
ಕಾರ್ಯಾಗಾರದ ಮೊದಲ ಅವಧಿಯಲ್ಲಿ ಮೂರು ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಕಲಿಕಾ ಚೇತರಿಕೆಯ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲಾಯಿತು. ಪ್ರಸಕ್ತ ಸಾಲಿನ ಕಲಿಕಾ ಚೇತರಿಕೆ ಸಂಬಂಧಿಸಿದ ಕಲಿಕಾ ಫಲಗಳ ಪ್ರಾತ್ಯಕ್ಷಿಕೆಯನ್ನು ನಡೆಸಿ, ಚರ್ಚಿಸಲಾಯಿತು. ಮಧ್ಯಾಹ್ನ ವಿರಾಮದ ನಂತರ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ವಿಷಂiiಗಳ ಕಲಿಕಾ ಚೇತರಿಕೆ ಪ್ರಶ್ನಾ ಕೋಠಿ ತಯಾರಿ ಮಾಡಲಾಯಿತು. ಕಾರ್ಯಾಗಾರದಲ್ಲಿ ತಾಲೂಕಿನ ೭೨ ಶಿಕ್ಷಕರು ಹಾಜರಿದ್ದರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ರವರು ಸ್ವಾಗತಿಸಿ, ಚೊಕ್ಕಾಡಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿಯವರು ಸಭಾಧ್ಯಕ್ಷತೆಯನ್ನು ವಹಿಸಿದರು. ೩ ಭಾಷಾ ವಿಷಯಗಳ ೨ ಶಿಕ್ಷಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.