ಮಡಪ್ಪಾಡಿ : ಸೊಸೈಟಿ ಸಿಬ್ಬಂದಿ ಚಿನ್ನಪ್ಪ ಗೌಡ ನಡುಬೆಟ್ಟುರವರಿಗೆ ವಿದಾಯ ಕೂಟ – ಸನ್ಮಾನ ಕಾರ್ಯಕ್ರಮ

0

 

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಾರಾಟ ಗುಮಾಸ್ತನಾಗಿ ನಿವೃತ್ತರಾದ ಚಿನ್ನಪ್ಪ ಗೌಡ ನಡುಬೆಟ್ಟುರವರಿಗೆ ವಿದಾಯ ಸಮಾರಂಭ ಸೆ.24ರಂದು ಮಡಪ್ಪಾಡಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮರವರು ವಹಿಸಿದ್ದರು.

ಟಿ.ಎ.ಪಿ.ಸಿ.ಎಂ.ಎಸ್. ಸುಳ್ಯ ಇದರ ಅಧ್ಯಕ್ಷರಾಗಿರುವ ನಿತ್ಯಾನಂದ ಮುಂಡೋಡಿಯವರು ಚಿನ್ನಪ್ಪ ಗೌಡರವರನ್ನು ಶಾಲು, ಸ್ಮರಣಿಕೆ, ಸನ್ಮಾನಪತ್ರ ನೀಡಿ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಪಿ.ಸಿ.ಜಯರಾಮರವರು ಚಿನ್ನದ ಸರ ತೊಡಿಸಿ ಗೌರವಿಸಿದರು.

 

ವೇದಿಕೆಯಲ್ಲಿ ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಮಿತ್ರ ದೇವ ಮಡಪ್ಪಾಡಿ, ಹಾಲು ಉತ್ಪಾದಕ ರ ಮಹಿಳಾ ಸಹಕಾರಿ ಸಂಘ ಮಡಪ್ಪಾಡಿ ಯ ಅಧ್ಯಕ್ಷೆ ಶಕುಂತಲಾ ಕೇವಳ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಂಗಯ್ಯ ಪೂಂಬಾಡಿ, ಧರ್ಮಪಾಲ ತಳೂರು, ನಿರ್ದೇಶಕರಾದ ಪ್ರಭಾಕರ ಕೇವಳ, ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಪೇರಪ್ಪ ಮಲೆ, ಶ್ರೀಮತಿ ತಾರಾ ಜೆ.ಸಿ., ಶ್ರೀಮತಿ ಕುಂಞಕ್ಕ, ಶೇಖರ ಕಜೆಯವರು ಉಪಸ್ಥಿತರಿದ್ದರು.
ಶ್ರೀಮತಿ ಪ್ರವೀಣಾ ಯತೀಂದ್ರನಾಥ ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಸ್ವಾಗತಿಸಿದರು. ಸೊಸೈಟಿ ಸಿಬ್ಬಂದಿ ಸುನಿಲ್ ಮಡಪ್ಪಾಡಿ ವಂದಿಸಿದರು. ನಿರ್ದೇಶಕರಾದ ಸೋಮಶೇಖರ ಕೇವಳ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪ್ರಮುಖರಾದ ದಿನೇಶ್ ಮಡಪ್ಪಾಡಿ, ಎಂ.ಡಿ.ವಿಜಯಕುಮಾರ್, ಜಯರಾಮ ಹಾಡಿಕಲ್ಲು, ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಜಯರಾಂ ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಸೊಸೈಟಿ ಸದಸ್ಯರು, ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here