ಸೆ.27 – 30: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.27ರಿಂದ ಸೆ.30ರವರೆಗೆ ಜರುಗಲಿದೆ.

ಸೆ.27ರಂದು ಬೆಳಿಗ್ಗೆ ಕದಿರು ವಿನಿಯೋಗ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ನಂತರ ನವಾನ್ನ ಭೋಜನ ನಡೆಯಲಿದೆ.
ಸೆ.30ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ದುರ್ಗಾ ತ್ರಿಕಾಲ ಪೂಜೆ ನಡೆಯಲಿದೆ.
ಅ.1ರಂದು ತಿಂಗಳ ಶುಕ್ಲಪಕ್ಷದ ಷಷ್ಠಿ ಕಾರ್ಯಕ್ರಮ, ಅ.4ರಂದು ನವರಾತ್ರಿ ಪ್ರಯುಕ್ತ ವಿಶೇಷ ಆಯುಧ ಪೂಜೆ, ಅ.5ರಂದು ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶೋಭಾಯಾತ್ರೆ ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ತಿಳಿಸಿದ್ದಾರೆ.