ಸೆ.30 ರಂದು ಕೆ.ಎಸ್.ಆರ್.ಟಿ.ಸಿ ಸಂಚಾರ ನಿಯಂತ್ರಕರಾದ ಗೋಪಾಲಕೃಷ್ಣ ದೇವಸ್ಯ ಸೇವಾ ನಿವೃತ್ತಿ

0
271

ಪುತ್ತೂರು ವಿಭಾಗದ ಸುಳ್ಯ ಡಿಪೋದ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣ ದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿರುವ ಎಡಮಂಗಲ ಗ್ರಾಮದ ದೇವಸ್ಯ ಗೋಪಾಲಕೃಷ್ಣ ರವರು ಸೆ.30 ರಂದು ಸೇವಾ ನಿವೃತ್ತರಾಗಲಿದ್ದಾರೆ.

ಇವರು 1989 ರಲ್ಲಿ ಮಂಗಳೂರು ವಿಭಾಗದ ಪುತ್ತೂರು ಘಟಕದಲ್ಲಿ ನಿರ್ವಾಹಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಹಲವಾರು ವಿಭಾಗದಲ್ಲಿ ಸೇವೆ ಸಲ್ಲಿಸಿ 2016 ರಲ್ಲಿ ಸಂಚಾರ ನಿಯಂತ್ರಕರಾಗಿ ಭಡ್ತಿಗೊಂಡರು. ಸಂಸ್ಥೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೆ.30 ರಂದು ನಿವೃತ್ತಿ ಹೊಂದಲಿದ್ದಾರೆ.
ಇವರ ಪತ್ನಿ ಶ್ರೀಮತಿ ಮಂಜುಳಾ ಗೃಹಿಣಿಯಗಿದ್ದಾರೆ. ಪುತ್ರಿಯರಾದ ರಕ್ಷಾ, ವೀಕ್ಷಾ ಮತ್ತು ಪುತ್ರ ಧನ್ವಿನ್ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here