ದಸರಾ ರಜೆ ಒಂದು ವಾರ ಮುಂದಕ್ಕೆ

0
1152

 

 

ಅ.3 ರಿಂದ ಅ.16 ರ ತನಕ ದಸರಾ ರಜೆ ನೀಡಲು ಸರಕಾರ ಸೂಚನೆ

ಸೆ.26ರಿಂದ ನೀಡಲಾಗಿದ್ದ ದಸರಾ ರಜೆಯನ್ನು ಸರಕಾರ ಒಂದು ವಾರ ಮುಂದಕ್ಕೆ ಹಾಕಿದ್ದು ಅ.3 ರಿಂದ ರಜೆ ನೀಡಲು ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಈ ಬಾರಿ ದಸರಾ ರಜೆಯನ್ನು ಸೆ.26 ರಿಂದ ಅ.10 ರ ವರೆಗೆ ನೀಡಲು ನಿರ್ಧರಿಸಿ ಸರಕಾರದ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದೀಗ ಆ ಪರಿಷ್ಕೃತ ಆದೇಶವನ್ನು ಸರಕಾರ ಹೊರಡಿಸಿದ್ದು ಅ.3 ರಿಂದ ಅ.16 ರ ವರೆಗೆ ದಸರಾ ರಜೆಯನ್ನು ನೀಡಲು ಸೂಚಿಸಿದೆ.

ಅಲ್ಲದೆ ಮಂಗಳೂರು ತಾಲೂಕಿಗೆ ಹೆಚ್ಚುವರಿಯಾಗಿ 4 ದಿನ‌ರಜೆ ನೀಡಿದ್ದು ಸೆ.28 ರಿಂದ ಅ.1 ರವರೆಗೆ ಹೆಚ್ಚುವರಿ ರಜೆ ಇರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here