ಕೊಲ್ಲಮೊಗ್ರ : ಕಡಂಬಳದಲ್ಲಿ ಸರ್ವ‌ಋತು ಸೇತುವೆ ನಿರ್ಮಾಣ

0

 

ಬಿಜೆಪಿ ಮಂಡಲ ಸಮಿತಿ ಹೇಳಿಕೆ

ಇತ್ತೀಚೆಗೆ ಭೀಕರ ಪ್ರವಾಹದಿಂದಾಗಿ ಸುಳ್ಯ ಕ್ಷೇತ್ರದ ಕೆಲವೊಂದು ಭಾಗಗಳಲ್ಲಿ ವಿಪರೀತ ಸಮಸ್ಯೆಗಳಾಗಿದ್ದು, ಕೊಲ್ಲಮೊಗ್ರ ಗ್ರಾಮದ ಕಡಂಬಳ ಸೇತುವೆ ಕೂಡಾ ಕೊಚ್ಚಿ ಹೋಗಿದೆ. ಮಳೆಗಾಲದಲ್ಲಿ ತಕ್ಷಣ
ಸೇತುವೆ ನಿರ್ಮಾಣ ಕಾರ್ಯ ಅಸಾಧ್ಯವಾದುದರಿಂದ ಅಲ್ಲಿ ಸ್ವಲ್ಪ ವಿಳಂಬವಾಗಿ ಮೋರಿ ಪೈಪು ಅಳವಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರು ಹಾಗು ಸಚಿವ ಎಸ್.ಅಂಗಾರರವರ ನೇತೃತ್ವದಲ್ಲಿ ಸರ್ವ ಋತು ಸೇತುವೆ ನಿರ್ಮಾಣ ಕಾರ್ಯ ನಡೆಯಲಿದೆ. ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಈ ಭಾಗದ ಜನರ ಎಲ್ಲಾ ಆಶೋತ್ತರಗಳು ಒಂದೊಂದಾಗಿ ಈಡೇರಿಸಲಾಗುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.