ಸುಳ್ಯ: ರೈಟ್‌ ಟು ಲಿವ್ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ

0

 

ಬೆಂಗಳೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಕೋಟೆ ಫೌಂಡೇಷನ್ ನ ಆಶ್ರಯದಲ್ಲಿರುವ ರೈಟ್ ಟು ಲಿವ್ ಸಂಸ್ಥೆಯ ವತಿಯಿಂದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಬೇತಿ ನೀಡಲಿದೆ.
ತರಬೇತಿಯು ಅಕ್ಟೋಬರ್ ತಿಂಗಳಿನಿಂದ ಮುಂದಿನ ಜನವರಿ ತಿಂಗಳ ತನಕ ನಡೆಯಲಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೈಕ್ರೋಸಾಫ್ಟ್ ಆಫೀಸ್ 365, ಫೋಟೋಶಾಫ್, ಕ್ಯಾನ್ವ, ಮೈಕ್ರೋಸಾಫ್ಟ್ ಪಬ್ಲಿಷರ್ (ಡಿ.ಟಿ.ಪಿ.),
ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಟ್ಯಾಲಿ ಜಿಎಸ್‌ಟಿ ಮತ್ತು ಆನ್ಲೈನ್ ಬ್ಯಾಂಕಿಂಗ್, ವೆಬ್ಸೈಟ್ ಡಿಸೈನ್, ಗ್ರಾಫಿಕ್ಸ್ ಡಿಸೈನ್, ಕ್ಲೌಡ್ ಆಫೀಸ್, ಆಡಿಯೋ ವಿಡಿಯೋ ಎಡಿಟಿಂಗ್, ಲೈಫ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ರೆಸ್ಯೂಮ್ ಇಂಟರ್ವೀವ್ ಪ್ರಿಪರೇಶನ್ ಬಗ್ಗೆ ತರಬೇತಿ ನೀಡಲಾಗುವುದು. 18 ರಿಂದ 45 ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು 9916087028 ಅಥವಾ [email protected] ಮತ್ತು ವೆಬ್ ಸೈಟ್ www.righttolive.org ಸಂಪರ್ಕಿಸುವಂತೆ ಕೋರಲಾಗಿದೆ.