ಅ.16 ರಂದು ಆದಿದ್ರಾವಿಡ ಸಮ್ಮಿಲನ ಮತ್ತು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಅಭಿನಂದನೆ, ಸನ್ಮಾನ

0

 

ಆದಿದ್ರಾವಿಡ ಯುವ ವೇದಿಕೆ ದ.ಕ. ಜಿಲ್ಲೆ ದರ ಆಶ್ರಯದಲ್ಲಿ ಆದಿದ್ರಾವಿಡ ಸಮ್ಮಿಲನ ಮತ್ತು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಅಭಿನಂದನೆ ಸನ್ಮಾನ ಹಾಗೂ ಕ್ರೀಡಾಕೂಟ ಅ.೧೬ರಂದು ಸುಳ್ಯದ ಕೆ.ವಿ. ಪುರಭವನದಲ್ಲಿ ನಡೆಯಲಿದೆ ಎಂದು ಯುವ ವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ ಬಿ.ಕೆ. ತಿಳಿಸಿದ್ದಾರೆ.
ಸೆ.೨೪ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಬೆಳಗ್ಗೆ ಉದ್ಘಾಟನೆ ಜರುಗಿದ ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ವಿವಿಧ ಸ್ಪರ್ಧೆಗಳು ನಡೆಯುವುದು.
ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್‌ಭಾಗ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
೨೦೨೧ – ೨೨ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೫೦೦ ಅಂಕಕ್ಕಿಂತ ಹೆಚ್ಚು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ೪೭೫ ಅಂಕಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭಿನಂದನೆ ಹಾಗೂ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಬಾಲಕೃಷ್ಣ ದೊಡ್ಡೇರಿ, ಕಲಾ ಕ್ಷೇತ್ರದಲ್ಲಿ ಮೋಹನ್ ಶೇಣಿ, ಕೃಷಿ ಕ್ಷೇತ್ರದಲ್ಲಿ ಬಿಯಾಳು ಬೇರ್ಯರನ್ನು ಸನ್ಮಾನಿಸಲಾಗುವುದು. ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುವ ಕಾರ್ಯಕ್ರಮವೂ ಇದೆ ಎಂದು ಅವರು ಹೇಳಿದರು.


ಅ.೯ರಂದು ಪುರುಷರಿಗೆ ಐವರ್ನಾಡು ಪ್ರೌಢಶಾಲಾ ವಠಾರದಲ್ಲಿ (ಆದಿದ್ರಾವಿಡರಿಗೆ) ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ತಾಲೂಕು ಮಟ್ಟದ ಹಗ್ಗಜಗ್ಗಾಟ ಹಾಗೂ ಗುಂಡೆಸೆತ ಸ್ಪರ್ಧೆ ನಡೆಯುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ವೇದಿಕೆಯ ಸತೀಶ್ ಬಿಳಿಯಾರು, ದಾಮೋದರ ಬೇರ್ಯ, ಗೋಪಾಲ ಅರಂಬೂರು, ಪ್ರಕಾಶ್ ಬೂಡು, ಸುಪ್ರಿತ್ ಕೊಯಿಲ, ರಾಜೇಶ್ ಉಬರಡ್ಕ, ವಿಶ್ವನಾಥ ಕೊಯಿಲ ಇದ್ದರು.