ಕೆ.ಪಿ.ಸಿ.ಸಿ. ವಕ್ತಾರರ ಪಟ್ಟಿ ಪುನರ್ ರಚನೆ

0
231

 

ಸುಳ್ಯದ ಭರತ್ ಮುಂಡೋಡಿ ಹಾಗೂ ಶೌವಾದ್ ಗೂನಡ್ಕ ವಕ್ತಾರರಾಗಿ ಪುನರಾಯ್ಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರ ಪಟ್ಟಿಯನ್ನು ಪುನರ್ರಚನೆ ಮಾಡಲಾಗಿದೆ. ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಕೆ.ಪಿ.ಸಿ.ಸಿ.ಮಾಧ್ಯಮ ಘಟಕದ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆಯವರು ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಹಿರಿಯರಿಗೂ, ಯುವಕರಿಗೂ ಪಟ್ಟಿಯಲ್ಲಿ ಪ್ರಾತಿನಿಧ್ಯವನ್ನು ನೀಡಲಾಗಿದೆ.
ಈ ಹಿಂದೆ ಮಾಧ್ಯಮ ವಕ್ತಾರ ( ಪ್ಯಾನಲಿಸ್ಟ್ ) ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಹಾಗೂ ಯುವ ನಾಯಕ ಶೌವಾದ್ ಗೂನಡ್ಕರವರನ್ನು ವಕ್ತಾರ ( ಸ್ಪೋಕ್ಸ್ ಪರ್ಸನ್ ) ಹುದ್ದೆಗೆ ಭಡ್ತಿಗೊಳಿಸಿ ಪುನರಾಯ್ಕೆಗೊಳಿಸಲಾಗಿದೆ.

LEAVE A REPLY

Please enter your comment!
Please enter your name here