ಮುತ್ತಿನ ನಗರಿ ಪುತ್ತೂರಿನಲ್ಲಿ ಜೋಸ್ ಆಲುಕ್ಕಾಸ್‌ನ ಚತುರ್ಥ ಸಂಭ್ರಮ

0

ಸೆ.30ರ ವರೆಗೆ ಮುಂದುವರೆಯಲಿದೆ ವಾರ್ಷಿಕೋತ್ಸವ ಕೊಡುಗೆ

ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ಸುನಿಲ್ದಾಣದ ಹಿಂದುಸ್ಥಾನ್ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡು ನಾಲ್ಕು ವರ್ಷ ಪೂರೈಸಿದ್ದು, ಸೆ.26ರಂದು ಶಾಖೆಯಲ್ಲಿ ನಾಲ್ಕನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಟಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಖ್ಯಾತಿಯ ಚೈತ್ರ ಶೆಟ್ಟಿ ಹಾಗೂ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ನ ನಿರ್ದೇಶಕ ರಾಹುಲ್ ಅಮೀನ್ ಭಾಗವಹಿಸಲಿದ್ದಾರೆ.


ಅಂತರಾಷ್ಟ್ರೀಯ ಖ್ಯಾತಿಯ ಸಂಸ್ಥೆ: ಜೋಸ್ ಆಲುಕ್ಕಾಸ್ ಅಂತರಾಷ್ಟ್ರೀಯ ಗುಣಮಟ್ಟದ ಚಿನ್ನದ ಮಾರಾಟಗಾರರು ಎಂದೇ ಪ್ರಸಿದ್ಧಿ ಹೊಂದಿರುವ ಸಂಸ್ಥೆಯಾಗಿದೆ. ಐಎಸ್‌ಒ 9001:2000 ಕಂಪೆನಿಯಾಗಿರುವ ಜೋಸ್ ಆಲುಕ್ಕಾಸ್ ಸರ್ಕಾರ ಪ್ರಮಾಣಿತ ಬಿಐಎಸ್ ಹಾಲ್ ಮಾರ್ಕ್ ಚಿನ್ನಾಭರಣಗಳನ್ನು ಮಾತ್ರ ಪ್ರದರ್ಶಿಸುತ್ತಿದೆ. ಪ್ರತಿಯೊಬ್ಬರೂ ಶುದ್ಧ 916 ಹಾಲ್ ಮಾರ್ಕ್ ಚಿನ್ನದ ಆಭರಣಗಳನ್ನೇ ಕೊಂಡುಕೊಳ್ಳಬೇಕೆಂಬುದು ಸಂಸ್ಥೆಯ ಧ್ಯೇಯವಾಗಿದ್ದು, ಇದಕ್ಕೆ ಅನುಗುಣವಾಗಿ ಮಾಸಿಕವಾಗಿ ಹಣ ಪಾವತಿ ಮಾಡುವ ಸ್ಕೀಂಗಳನ್ನು ಮಾಡಿದೆ.ಜೋಸ್ ಆಲುಕ್ಕಾಸ್‌ನಲ್ಲಿ ಗ್ರಾಹಕರು ಮದುವೆ ಆಭರಣಗಳ ವಿಭಾಗದಲ್ಲಿ `ಶುಭಮಾಂಗಲ್ಯಂ’ ನೊಂದಿಗೆ ಸಾಟಿಇಲ್ಲದ ಸಂಗ್ರಹವನ್ನು ಕಾಣಬಹುದು. `ಪರಂಪರಾ’ ಸಂಗ್ರಹದೊಂದಿಗೆ ಸಾಂಪ್ರದಾಯಿಕ ವಿನ್ಯಾಸಗಳನ್ನು ಆರಿಸಿಕೊಳ್ಳಬಹುದು. `ರಾಜಮುಖಿ’ ಸಂಗ್ರಹದೊಂದಿಗೆ ರಾಜಯೋಗ್ಯ ವಿನ್ಯಾಸಗಳನ್ನು ಆಯ್ದುಕೊಳ್ಳಬಹುದಾಗಿದೆ. ಇಷ್ಟುಮಾತ್ರವಲ್ಲದೆ ಚೆಟ್ಟಿನಾಡ್, ನಗಾಸ್, ಟೆಂಪಲ್ ಜ್ಯುವೆಲ್ಲರಿಯ ಅಪಾರ ಸಂಗ್ರಹವೇ ಇಲ್ಲಿದೆ. ಕಡಿಮೆ ತೂಕದಲ್ಲಿ ಈ ಎಲ್ಲಾ ಆಭರಣಗಳ ಹಾಗೂ ಹರಳಿನ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ.

ಸಂಸ್ಥೆಯ ಬಗ್ಗೆ: ಜೋಸ್ ಆಲುಕ್ಕಾಸ್ ಸನ್ಸ್ ಜ್ಯುವೆಲ್ಲರಿ ಗ್ರೂಪ್ ನ ಚೇರ್‌ಮೆನ್ ಜೋಸ್ ಆಲುಕ್ಕಾರವರು ಈ ಸಂಸ್ಥೆಯ ಸ್ಥಾಪಕರೂ ಹೌದು. ೧೯೬೪ರಲ್ಲಿ ಇವರ ತಂದೆ ಆಲುಕ್ಕಾ ವರ್ಗೀಸ್‌ರವರು ತ್ರಿಶೂರ್‌ನಲ್ಲಿ ಚಿನ್ನದ ಉದ್ದಿಮೆ ಆರಂಭಿಸಿದ್ದರು. ಆ ಬಳಿಕ ಜೋಸ್ ಆಲುಕ್ಕಾರವರ ಮುಂದಾಲೋಚನೆ ಮತ್ತು ದೃಢಸಂಕಲ್ಪದ ಕಾರ್ಯ ಸಾಂಸ್ಥಿಕ ರೂಪ ನೀಡಿ ಇಂದು ಚಿನ್ನಾಭರಣ ಕ್ಷೇತ್ರದಲ್ಲೇ ಬಹುದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಈಗಾಗಲೇ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ ಮತ್ತು ತೆಲಂಗಾಣ, ಮಹಾರಾಷ್ಟ್ರ ರಾಜ್ಯದಲ್ಲಿ ಜೋಸ್ ಆಲುಕ್ಕಾಸ್ ಸಂಸ್ಥೆ ಮಳಿಗೆಯನ್ನು ಹೊಂದಿದೆ. ಕರ್ನಾಟಕದ ಬೆಂಗಳೂರಿನಲ್ಲಿ 3, ಮಂಗಳೂರಿನಲ್ಲಿ 2, ಮೈಸೂರು, ಉಡುಪಿ, ಪುತ್ತೂರಿನಲ್ಲಿ ತಲಾ ಒಂದೊಂದು ಮಳಿಗೆಯನ್ನು ಹೊಂದಿದೆ.

ನಾಲ್ಕನೇ ವಾರ್ಷಿಕೋತ್ಸವದ ಭರ್ಜರಿ ಆಫರ್: ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವುದರ ಮೂಲಕ ಅದ್ದೂರಿಯ ಆಚರಣೆಗೆ ಸಿದ್ಧತೆ ಮಾಡಲಾಗಿದೆ. ಹೊಸ ಸ್ಟಾಕ್, ಹೊಸ ಸಂಗ್ರಹಗಳು ಮತ್ತು ಹೊಚ್ಚ ಹೊಸ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಅಲ್ಲದೇ ಮದುವೆ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಘೋಷಿಸಿದೆ. ಪ್ರತಿ ಖರಿದೀಗೆ ಉಚಿತ ಬೆಲೆಬಾಳುವ ಉಡುಗೊರೆಗಳು, ಲಕ್ಕಿ ಡ್ರಾದ ಮೂಲಕ ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ, ಪ್ಲಾಟಿನಂ ಆಭರಣಗಳಿಗೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ ದೊರೆಯಲಿದೆ. ಬಿಐಎಸ್ ಪ್ರಮಾಣೀಕೃತ ೯೧೬ ಚಿನ್ನದ ಆಭರಣಗಳ ಅತ್ಯಪೂರ್ವ ಸಂಗ್ರಹವೇ ಇಲ್ಲಿದ್ದು, ಕಡಿಮೆ ಮೇಕಿಂಗ್ ಚಾರ್ಜಸ್ ಹಾಗೂ ಬಯ್ ಬ್ಯಾಕ್ ಗ್ಯಾರಂಟಿ ಯನ್ನು ಸಂಸ್ಥೆ ನೀಡಲಿದೆ. ವಾರ್ಷಿಕೋತ್ಸವದ ವಿಶೇಷ ಆಫರ್ ಗಳು ಸೆ.26ರಂದು ಆರಂಭಗೊಂಡು ಸೆ.೩೦ರಂದು ಕೊನೆಗೊಳ್ಳಲಿದೆ.

ಸೂಪರ್ ಮಾರ್ಕೆಟ್ ಯೋಜನೆ: ಸಂಸ್ಥೆಯ ಕಾರ್ಯ ವೈಖರಿ, ದೂರಗಾಮಿ ಚಿಂತನೆ, ಕ್ರಮಬದ್ಧ ಯೋಜನೆ, ಜನಪ್ರಿಯತೆಯ ವಿಸ್ತಾರತೆಯ ಏಕಮುಖದ ಕಾರ್ಯವಿಧಾನದಿಂದ ಮೊತ್ತಮೊದಲ ಬಾರಿಗೆ ಚಿನ್ನದ ಸೂಪರ್ ಮಾರ್ಕೆಟ್ ಪರಿಕಲ್ಪನೆಯನ್ನು ತಂದು ಹೆಸರು ಪಡೆಯಿತು. 22 ಕ್ಯಾರೆಟ್ ಚಿನ್ನ ಮಾರಾಟದಲ್ಲಿ ಸಂಸ್ಥೆ ಹೆಸರುವಾಸಿಯಾಗಿದೆ.

ವಿಸ್ತಾರ ಪಾರ್ಕಿಂಗ್: ಸಂಸ್ಥೆಗೆ ಆಗಮಿಸುವ ಗ್ರಾಹಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಹಿಂದುಸ್ಥಾನ್ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.

ಭಾನುವಾರವೂ ಮಳಿಗೆ ತೆರೆದಿರುತ್ತದೆ: ಗ್ರಾಹಕರು ಬಿಡುವಿನ ವೇಳೆಯಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ಆರಂಭದ ದಿನಗಳಿಂದಲೂ ಭಾನುವಾರದಂದು ತೆರೆದು ಕಾರ್ಯಚರಿಸುತ್ತಿತ್ತು. ಇದು ಗ್ರಾಹಕರಲ್ಲಿ ವ್ಯಾಪಕ ಪ್ರಶಂಸೆಗೂ ಪಾತ್ರವಾಗಿತ್ತು.

@ ಸೆ.30ರ ವರೆಗೆ ಮುಂದುವರೆಯಲಿದೆ ವಾರ್ಷಿಕೋತ್ಸವದ ಕೊಡುಗೆ
@ ಪ್ರತಿ ಖರೀದಿಗೆ ಉಚಿತ ಬೆಲೆಬಾಳುವ ಉಡುಗೊರೆಗಳು
@ ಲಕ್ಕಿ ಡ್ರಾದ ಮೂಲಕ ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ
@ ಪ್ಲಾಟಿನಂ ಅಭರಣಗಳಿಗೆ ೭% ರಿಯಾಯಿತಿ
@ ವಜ್ರಗಳ ಮೇಲೆ ೨೦% ರಿಯಾಯಿತಿ

 

ಗ್ರಾಹಕರ ಸಹಕಾರಕ್ಕೆ ಆಭಾರಿಯಾಗಿದ್ದೇ

ಜೋಸ್ ಆಲುಕ್ಕಾಸ್ ಭಾರತದ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಪ್ರತಿ ಗ್ರಾಹಕರಿಗೆ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡುವುದು, ಇತ್ತೀಚಿನ ವಿನ್ಯಾಸದ ಶುದ್ಧ ಚಿನ್ನದ ಆಭರಣಗಳನ್ನು ಜನರಿಗೆ ಪರಿಚಯಿಸುವಲ್ಲಿ ಜೋಸ್ ಆಲುಕ್ಕಾಸ್ ಚಿನ್ನಾಭರಣ ಸಂಸ್ಥೆ ಮುಂಚೂಣಿಯಲ್ಲಿದೆ. ಕಳೆದ ನಾಲ್ಕು ವರುಷಗಳಿಂದ ಈ ಭಾಗದ ಜನರು ನಮಗೆ ಉತ್ತಮ ಸಹಕಾರ ನೀಡಿದ್ದಾರೆ. ಅವರಿಗೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.

-ಬಿಜು ಟಿ.ಎಲ್., ಏರಿಯಾ ಮ್ಯಾನೇಜರ್, ಜೋಸ್ ಆಲುಕ್ಕಾಸ್

 

LEAVE A REPLY

Please enter your comment!
Please enter your name here