ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟ್ರಮಣ ಅಂಗಡಿಮಜಲು ರಾಜೀನಾಮೆ

0

 

ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟ್ರಮಣ ಅಂಗಡಿಮಜಲು ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ಸೂಚನೆಯಂತೆ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿತ್ತು. ಅದರಂತೆ ಎರಡೂವರೆ ವರ್ಷ ಅವಧಿಗೆ ಅಧ್ಯಕ್ಷರಾಗಿದ್ದ ಮಹಾಬಲ ಕಟ್ಟಕ್ಕೋಡಿಯವರು ರಾಜೀನಾಮೆ ನೀಡಿ ನೂತನ ಅಧ್ಯಕ್ಷರ ಆಯ್ಕೆಯೂ ಸೆ.19ರಂದು ನಡೆದಿತ್ತು. ಅದೇ ದಿನ ಉಪಾಧ್ಯಕ್ಷ ಸ್ಥಾನಕ್ಕೆ ತನ್ನ ಅವಧಿ ಮುಗಿದ ಹಿನ್ನೆಲೆಯಲ್ಲಿ ವೆಂಕಟ್ರಮಣ ಅಂಗಡಿಮಜಲು ರವರು ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ.