ಡಾನ್ಸ್ ಕರ್ನಾಟಕ ಡಾನ್ಸ್ -6′ ಗ್ರಾಂಡ್ ಫಿನಾಲೆ

0

 

ಸೆಕೆಂಡ್ ರನ್ನರ್ ಅಪ್ ಆದ ಸುಳ್ಯದ ಪ್ರಣನ್ಯ ಕುದ್ಪಾಜೆ

ಇಂದು ಕಾರ್ಯಕ್ರಮ ಝೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರ

ಜೀ ಕನ್ನಡದಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್ -೬’ ಗ್ರಾಂಡ್ ಫಿನಾಲೆ ನಿನ್ನೆ ಹಾಗೂ ಇಂದು ಪ್ರಸಾರವಾಗಲಿದೆ. ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿರುವ ಈ ವೇದಿಕೆ ನಾಟ್ಯ ವೈಭವವನ್ನು ಇಡೀ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ.
ಈ ಸ್ಪರ್ಧೆಯಲ್ಲಿ ಮರ್ಕಂಜ ಗ್ರಾಮದ ಕುದ್ಪಾಜೆ ಮನೆಯ ರಾಧಾಕೃಷ್ಣ ಹಾಗೂ ನಶ್ಮಿತ ದಂಪತಿಯ ಪುತ್ರಿ ೫ ವರ್ಷದ ಪುಟಾಣಿ ಪ್ರಣನ್ಯ ಭಾಗವಹಿಸಿ, ಎಲ್ಲರ ಗಮನ ಸೆಳೆದು ಫಿನಾಲೆ ತಲುಪಿ, ಕಾರ್ಯಕ್ರಮದ ಸೆಕೆಂಡ್ ರನ್ನರ್ ಆಫ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ. ಈಕೆಗೆ ದಕ್ಷಿತ್ ಗೌಡ ಜೋಡಿಯಾಗಿದ್ದರು.


ಸತತ 6 ತಿಂಗಳುಗಳ ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ ಈ ಕಾರ್ಯಕ್ರಮ ಕಳೆದ ಐದು ಸೀಸನ್‌ಗಳಿಗಿಂತ ವಿಶಿಷ್ಟವಾಗಿತ್ತು. ಈ ಬಾರಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರಿಂದ ವೇದಿಕೆಗೆ ಮತ್ತಷ್ಟು ಕಳೆಗಟ್ಟಿತು ಹಾಗು ಘನತೆ ಹೆಚ್ಚಿತು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ.


ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -೬ ನ ಗ್ರಾಂಡ್ ಫಿನಾಲೆ ಚಿತ್ರೀಕರಣವಿ ಸೆ.೨೧ ಬುಧವಾರದಂದು ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಿತು. ಪ್ರಶಸ್ತಿಯು ವೀಕ್ಷಕರ ಓಟಿನ ಆಧಾರದ ಮೇಲೆ ನಿರ್ಣಯಿಸಲಾಗಿತ್ತು.
ಕೊರಿಯೋಗ್ರಾಫರ್ ಸೇರಿ ಪ್ರಣನ್ಯ ಹಾಗೂ ದಕ್ಷಿತ್ ಗೆ 5.50 ಲಕ್ಷದ ಎಲೆಕ್ಟ್ರಿಕ್ ಸ್ಕೂಟಿ,
3 ಲಕ್ಷ ನಗದು ಬಹುಮಾನ ಹಾಗೂ ವಿಶೇಷ ಉಡುಗೊರೆ ಗಳು ಲಭಿಸಿದೆ .

ಪ್ರಣನ್ಯ ಮಂಗಳೂರಿನ ಚಿಗುರು ಟೀಮ್‌ನ ಸಂತೋಷ್ ಮಾಸ್ಟರ್‌ರವರೊಂದಿಗೆ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಪ್ರೀಕೆಜಿ ತರಗತಿ ಕಲಿಯುತ್ತಿರುವ ಪ್ರಣನ್ಯ ಈ ಹಿಂದೆ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಕೃಷ್ಣವೇಷ ಸ್ಪರ್ಧೆ ಪ್ರಥಮ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ದ್ವಿತೀಯ, ಪೊಸಿಟ್ಯೂವ್ ಫ್ರೊಡೆಕ್ಷನ್ ಅಯೋಜಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ, ಕರ್ನಾಟಕ ರಾಜ್ಯ ಡ್ಯಾನ್ಸ್ ಸ್ಟೋಟ್ಸ್ ಚಾಂಪಿಯನ್ ಮಡಿಕೇರಿ ೨೦೨೧ ಡ್ಯಾನ್ಸ್ ಸ್ಪರ್ಧೆಯಲ್ಲಿ ದ್ವಿತೀಯ, ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪೇಷಲ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಉಡುಪಿ ಪ್ರಥಮ, ಮರುಕ್ಯೂರಿ ಡಾನ್ಸ್ ಕ್ರೇವ್ ಬೆಳಂಪಳ್ಳಿ ಉಡುಪಿ ರಾಜ್ಯ ಮಟ್ಟದ ಡ್ಯಾನ್ಸ್‌ನಲ್ಲಿ ಪ್ರಥಮ, ರಾರಾಸಂ ಪೌಂಡೇಶನ್ (ರಿ) ಬಂಟ್ವಾಳ ಅಯೋಜಿಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಸೂಪರ್ ಕಿಡ್ಸ್ ಚಾನೆಲ್ ಡಿ ಬಾಸ್ ಬೆಂಗಳೂರು ಇವರು ಅಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಕಣ್ಣೂರು ಬಾಯ್ಸ್ ಅಕಾಡೆಮಿ ಮಂಗಳೂರು-೨೦೨೨ ಇವರ ಅಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ವಾರ್‌ನಲ್ಲಿ ದ್ವಿತೀಯ, ಪರಿವರ್ತನ ಸೆಂಟರ್ ಕಾಪು ೨೦೨೨ ಇವರು ಅಯೋಜಿಸಿದ ಡ್ಯಾನ್ಸ್ ಪ್ರಥಮ, ನಮ್ಮ ಕುಡ್ಲ ರಿಯಾಲಿಟಿ ಶೋನಲ್ಲಿ ಫೈನಲ್ ಹಂತಕ್ಕೆ ಬಂದಿರುತ್ತಾರೆ, ಡ್ಯಾನ್ ಬೇಬಿ ಡ್ಯಾನ್ಸ್ ವಿ೪ ನ್ಯೂಸ್ ಕರ್ನಾಟಕ ಮಂಗಳೂರು ಇವರು ಅಯೋಜಿಸಿದ ರಿಯಾಲಿಟಿ ಶೋಗೆ ಆಯ್ಕೆಯಾಗಿರುತ್ತಾರೆ, ಕಲರ್‍ಸ್ ಡ್ಯಾನ್ಸ್ ದಿವಾನೆ ಜ್ಯೂನಿಯರ್‍ಸ್ ಮುಂಬೈ ಇವರು ಅಯೋಜಿಸಿದ ರಿಯಾಲಿಟಿ ಶೋದಲ್ಲಿ ಭಾಗವಹಿಸಿರುತ್ತಾರೆ.