ಕೋಲ್ಚಾರಿನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಅ.ಭಾ ನೋಂದಣಿ ಕಾರ್ಯಕ್ರಮ

0

 

ಆಲೆಟ್ಟಿ ಗ್ರಾಮ ಬಿಜೆಪಿ ಯುವಮೋರ್ಚಾದ ಮಹಾಶಕ್ತಿ ಕೇಂದ್ರದ ವತಿಯಿಂದ ಅ.ಭ ಕಾರ್ಡ್ ನೋಂದಣಿ ಕಾರ್ಯಕ್ರಮ ಸೆ.25 ರಂದು ಕೋಲ್ಚಾರು ಶ್ರೀಶಾರದಾಂಬಾ ಭಜನಾ ಮಂದಿರದ ಸಭಾ ಭವನದಲ್ಲಿ ನಡೆಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆಲೆಟ್ಟಿ ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಂ.ಸದಸ್ಯೆ ಶಂಕರಿ ಕೊಲ್ಲರಮೂಲೆ, ಯುವ ಮೋರ್ಚಾ ಮಂಡಲ ಕಾರ್ಯದರ್ಶಿ ಸುನಿಲ್ ಕೇರ್ಪಳ,ಅಲೆಟ್ಟಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ,
ಪಂ.ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಸುದರ್ಶನ್ ಪಾತಿಕಲ್ಲು‌‌‌ ಹಾಗೂ ಬಾಲನ್ ಆಚಾರ್ಯ,ನಾಗರಾಜ್ ಬಡ್ಡಡ್ಕ, ಗಣೇಶ್ ಕಣಕ್ಕೂರು, ಪಕ್ಷದ ಕಾರ್ಯಕರ್ತರು, ಮತ್ತಿತರರು ಭಾಗವಹಿಸಿದ್ದರು.
ಒಟ್ಟು 107 ಮಂದಿ ಅ.ಭ ಕಾರ್ಡ್ ನೋಂದಣಿ ಮಾಡಿಸಿಕೊಂಡರು.