ಗ್ಯಾರೇಜ್ ಮಾಲಕ ಸಂಘದ ಮಾಸಿಕ ಸಭೆ ಮತ್ತು ಲೈಫ್ ‌ಮೆಂಬರ್ ಶಿಪ್ ಕಾರ್ಡ್ ವಿತರಣೆ

0

 

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ ಮತ್ತು ಲೈಫ್ ಮೆಂಬರ್ ಶಿಪ್ ಕಾರ್ಡ್ ವಿತರಣೆ ಕಾರ್ಯ ಕ್ರಮ ಸೆ 25ರಂದು ವಿಷ್ಣು ಸರ್ಕಲ್‌ ಸಂಘದ ಸಭಾಂಗಣದಲ್ಲಿ ನಡೆಯಿತು. ಮಲ್ಲೇಶ್ ಬೆಟ್ಟಂಪಾಡಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯ ದರ್ಶಿ ಜನಾರ್ದನ ದೊಳ ವರಧಿ ವಾಚಿಸಿದರು. ಸಭೆಯಲ್ಲಿ ಸಂಘದ ಕಟ್ಟಡದ ಕಾಮಗಾರಿ ಬಗ್ಗೆ ಗ್ಯಾರೇಜ್ ಮಾಲಕರು ಗಳು ಎದುರಿಸುತ್ತಿರುವ ಸಮಸ್ಯೆಗಳು, ವಿದ್ಯುತ್ ಸಮಸ್ಯೆ ಇದಕ್ಕೆ ಪರಿಹಾರದ ಬಗ್ಗೆ ಸಾಮೂಹಿಕ ವಾಗಿ ಪ್ರತಿಯೊಂದು ಗ್ಯಾರೇಜ್ ಮಾಲಕರು ಸದಸ್ಯತ್ವ ನೋಂದಣಿ ಮಾಡಲು ಚರ್ಚಿಸಲಾಯಿತು.ಮತ್ತು ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಈಸಂದರ್ಭದಲ್ಲಿ ಜತೆ ಕಾರ್ಯದರ್ಶಿ ಮನೋಹರ ಬೊಳ್ಳುರು, ಕೋಶಾಧಿಕಾರಿ ಗೋಪಾಲ ನಡುಬೈಲು. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾದ್ಯಕ್ಷರಾದ ನಾರಯಣ ಆಚಾರ್ಯ ಪೈಚಾರು, ನಿರ್ದೇಶಕರುಗಳು ಸದಸ್ಯರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here