ದ. ಕ. ಸಂಪಾಜೆ ಸಹಕಾರಿ ಸಂಘದ ಶತಮಾನೋತ್ಸವದ ಪೂರ್ವಭಾವಿ ಸಭೆ

0

ಗೌರವಾಧ್ಯಕ್ಷರಾಗಿ ಡಾI ಎಂ. ಎನ್. ರಾಜೇಂದ್ರ ಕುಮಾರ್,ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸುಳ್ಯ ತಾಲೂಕು ಇದರ ಶತಮಾನೋತ್ಸವ ಕಾರ್ಯಕ್ರಮವನ್ನು ಒಂದು ಮಾದರಿ ಕಾರ್ಯಕ್ರಮವಾಗಿ ಡಿಸೆಂಬರ್ ಅಥವಾ ಮುಂದಿನ ಜನವರಿ ತಿಂಗಳಿನಲ್ಲಿ ಆಚರಿಸಲು ಇಂದು ಪೂರ್ವಭಾವಿ ಸಭೆಯನ್ನು ಸಂಘದ ಸಮನ್ವಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

 

ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ “ಸಹಕಾರ ರತ್ನ” ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾl ಎಂ ಎನ್ ರಾಜೇಂದ್ರ ಕುಮಾರ್, ಅಧ್ಯಕ್ಷರಾಗಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಇವರನ್ನು ಸಹಕಾರಿಗಳು ಸರ್ವಾರ್ಮದಿಂದ ಸೂಚಿಸಿ ಅನುಮೋದಿಸಿದರು. ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಹಾಗೂ ಖಜಾಂಜಿ ನೇಮಕ ಮಾಡಲಾಯಿತು.

ಅಲ್ಲದೆ ಸ್ವಾಗತ ಸಮಿತಿ,ಸನ್ಮಾನ ಸಮಿತಿ, ಪ್ರಚಾರ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಅತಿಥಿ ಸತ್ಕಾರ ಸಮಿತಿ, ಕ್ರೀಡಾ ಸಮಿತಿ, ಕಾರ್ಯಕ್ರಮ ನಿರೂಪಣಾ ಸಮಿತಿ, ಚಪ್ಪರ ಮತ್ತು ಅಲಂಕಾರಿಕ ಸಮಿತಿ, ವಸ್ತು ಪ್ರದರ್ಶನ ಸಮಿತಿ ವಾಹನ ನಿಲುಗಡೆ ಸಮಿತಿ, ಶಿಸ್ತು ಸಮಿತಿ, ಆರೋಗ್ಯ ಸಮಿತಿ, ಹಾಗೂ ಸ್ವಚ್ಛತಾ ಮತ್ತು ನೀರಾವರಿ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್,ಉಪಾಧ್ಯಕ್ಷರಾದ ಲಿಸ್ಸೀ ಮೊನಾಲಿಸಾ, ಸಂಘದ ನಿರ್ದೇಶಕರಾದ ಗಣಪತಿ ಭಟ್, ಉಷಾ ಕೆ ಎಂ, ಸುಮತಿ ಶಕ್ತಿವೇಲು, ಆನಂದ ಪಿ ಎಲ್, ಜಗದೀಶ್ ರೈ, ಯಮುನಾ ಬಿ ಎಸ್, ಹಮೀದ್ ಎಚ್, ಜಾನಿ ಕೆ ಪಿ, ಚಂದ್ರಶೇಖರ ಕೆ ಯು ಮತ್ತು ಪ್ರಕಾಶ್ ಕೆ ಪಿ ರವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಂದಿಸಿದರು.