ಜಮೀಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

0

ಶೈಕ್ಷಣಿಕ ಮಾಹಿತಿ ಕಾರ್ಯಗಾರ

ಸುಳ್ಯ ತಾಲೂಕು ಘಟಕ ಜಮೀಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಹಾಗೂ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಸೆ.24ರಂದು ಸುಳ್ಯ ಅನ್ಸಾರಿಯಾ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹಾಜಿ ಹಸೈನಾರ್ ಗೋರಡ್ಕ ವಹಿಸಿದ್ದರು.

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು. ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹಾಜಿ ಮೊಹಮ್ಮದ್ ಮುಬೀನ್ ವಿದ್ಯಾರ್ಥಿ ವೇತನ ವಿತರಣೆ ನಡೆಸಿ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾಗಿ ಮತ್ತು ನೋಟರಿ ಮಡಿಕೇರಿ ತಾಲೂಕು ಇದರ ಅಬ್ದುಲ್ಲ ಭಾಗವಹಿಸಿ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಶೈಕ್ಷಣಿಕ ಕಾರ್ಯಗಾರ ನಡೆಸಿದರು.


ಮುಖ್ಯ ಅತಿಥಿಗಳಾಗಿ ಆಹಾರ ನಿರೀಕ್ಷಕ ಮಹಮ್ಮದ್ ರಫೀಕ್, ಗಾಂಧಿನಗರ ಜಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ, ಅನ್ಸಾರಿಯ ಎಜುಕೇಶನಲ್ ಸೆಂಟರ್ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್ ಮಜೀದ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್, ಸಮಿತಿಯ ಕೋಶಾಧಿಕಾರಿ ಹಾಜಿ ಅಬ್ಬಾಸ್ ಸೆಂಟ್ಯಾರ್, ಉಪಾಧ್ಯಕ್ಷರುಗಳಾದ ಅಬೂಬಕ್ಕರ್ ಪಾರೆಕ್ಕಲ್, ಅಡ್ವಕೇಟ್ ಮೂಸಾ ಪಿ ಎಂ, ಕಾರ್ಯದರ್ಶಿ ಅಮೀರ್ ಕುಕುಂಬಳ, ಸಂಘಟನಾ ಕಾರ್ಯದರ್ಶಿ ಲತೀಫ್ ಅಡ್ಕಾರ್, ಪತ್ರಿಕಾ ಕಾರ್ಯದರ್ಶಿ ಅನೀಫ್ ಸಂಪಾಜೆ, ನಿರ್ದೇಶಕರುಗಳಾದ ನ್ಯಾಯವಾದಿಗಳಾದ ಅಬೂಬಕ್ಕರ್ ಅಡ್ಕಾರ್, ಪವಾಜ್ ಕನಕಮಜಲು, ಹಾಜಿ ಎಮ್ ಮುಹಿಯದ್ಧಿನ್ ಫ್ಯಾನ್ಸಿ, ಅಬ್ದುಲ್ ರಝಕ್, ರಿಯಾಜ್ ಕಟ್ಟೇ ಕ್ಕಾರ್ಸ್, ಶಾಫಿ ಕುತ್ತಮೊಟ್ಟೆ, ಅಬ್ದುಲ್ ಖಾದರ್ ಕಲ್ಲು ಗುಂಡಿ, ಹಾಗೂ ಮುಖಂಡರುಗಳಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೋ, ಹನೀಫ್ ನಾವೂರು ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕ ಅಬ್ದುಲ್ ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪೋಷಕರು ಭಾಗವಹಿಸಿದ್ದರು.