ಸುಳ್ಯ ತಾಲೂಕು ಅಲ್ಪಸಂಖ್ಯಾತರ ಒಕ್ಕೂಟದ ಪ್ರಥಮ ಸಭೆ

0

99 ಶೇಕಡ ಅಲ್ಪಸಂಖ್ಯಾತರರು ನೈಜ ಜಾತ್ಯತೀತರು : ಟಿ.ಎಂ.ಶಹೀದ್

ಸುಳ್ಯ ತಾಲೂಕು ಅಲ್ಪಸಂಖ್ಯಾತರ ಒಕ್ಕೂಟದ ಪ್ರಥಮ ಸಭೆಯು ಸೆ.19 ರಂದು ಉಡುಪಿ ಗಾರ್ಡನ್ ಹೊಟೇಲ್‌ನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಟಿ.ಎಂ.ಶಹೀದ್ ತೆಕ್ಕಿಲ್ ರವರು ಮಾತನಾಡಿ ಭಾರತ್ ಜೋಡೋ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲು ಕರೆ ನೀಡಿ ಅಲ್ಪಸಂಖ್ಯಾರು ತಮ್ಮ ಮತವನ್ನು ಕಾಂಗ್ರೇಸ್ ಪಕ್ಷಕ್ಕೆ ನೀಡುತ್ತಿದ್ದು, ಹೆಚ್ಚಿನ ಅವಕಾಶಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ದೊರೆಯಬೇಕು. ಎಲ್ಲಾ ಅಲ್ಪಸಂಖ್ಯಾತರ ಮತವನ್ನು ಮತದಾರ ಪಟ್ಟಿಯಲ್ಲಿ ಸೇರಿಸುವಂತೆ ತಿಳಿಸಿದರು. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರನ್ನು ಗೌರವಿಸಿದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಾರ್ಯಕ್ರಮದ ಆಯೋಜನ ಸಮಿತಿಯನ್ನು ಅಭಿನಂದಿಸಿ ಜಾತ್ಯತೀತ ತತ್ವ ನೆಲೆಯೂರುವ ಸಭೆ ಸಮಾರಂಭಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವಂತೆ ಕರೆ ನೀಡಿದರು. ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ಮಾಡುವಂತೆಯೂ ಒಗ್ಗಟ್ಟು ಇರಬೇಕು. ವಿದ್ಯಾರ್ಥಿಗಳ, ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಮತ್ತು ಸಮುದಾಯದ ಮಧ್ಯೆ ಇರುವ ಭಿನ್ನಾಬಿಪಪ್ರಾಯವನ್ನೂ ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶರೀಫ್ ಕಂಠಿ ನಾವೆಲ್ಲರೂ ಜಾತ್ಯತೀತ ಸಿದ್ದಾಂತವುಳ್ಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ದುಡಿಯಬೇಕು. ನಮ್ಮ ಕಾರ್ಯಕರ್ತರಿಗೆ ಆಗುವ ಅನ್ಯಾಯವನ್ನು ನೋಡಿ ನಿಲ್ಲಲು ಸಾಧ್ಯವಿಲ್ಲ. ನಮ್ಮ ತಂಡ ಸಂಪೂರ್ಣವಾಗಿ ಧಮನಿತರ ಶೋಷಿತರ ಜೊತೆಯಲ್ಲಿ ಇದ್ದೇವೆ ಎಂದು ಭರವಸೆ ನೀಡಿದರು.


ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೇಸ್ ಘಟಕದ ಕಾರ್ಯದರ್ಶಿ ಅಬುಶಾಲಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ,ಅಬ್ದುಲ್ ಮಜೀದ್ ನಡುವಡ್ಕ , ನ್ಯಾಯವಾದಿ ಫವಾಝ್, ಅಡ್ವಕೆಟ್ ಅಬೂಬಕ್ಕರ್ ,ಅಡ್ವಕೇಟ್ ಮೂಸಾ ಪೈoಬಚ್ಚಾಲ್, ಮುಜೀಬ್ ಪೈಚಾರ್, ಉ ಪಿ ಬಶೀರ್ ಬೆಳ್ಳಾರೆ, ಜುನೈದ್ ನಿಡುಬೆ, ಜಂಶೀರ್ ಶಾಲೆಕ್ಕರ್, ಜಲೀಲ್ ಬೆಳ್ಳಾರೆ, ರಹೀಂ ಬೀಜದಕಟ್ಟೆ , ಮಜೀದ್ , ಉನೈಸ್ ಪೆರಾಜೆ ,ತಾಜ್ ಮಹಮ್ಮದ್ ಸಂಪಾಜೆ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್ ಕೆ ಹನೀಫ್ ಸಂಪಾಜೆ, ಅಶ್ರಫ್ ಮರಕ್ಕಡ, ಸಾದಿಕ್ ಎಣ್ಮೂರು, ನಿಜಾರ್ ,ಮಸೂದ್ ಅಚ್ಚು, ಸಿಯಾಬ್ ಕೇರ್ಪಳ, ಶಮಿಉಲ್ಲ, ಉಮ್ಮರ್ ಕುರುಂಜಿ ಗುಡ್ಡೆ, ಸಾಧಿಕ್, ಹನೀಫ್ ಕುನ್ನಿಲ್ ಸಂಟ್ಯಾರ್, ಮಹಮದ್ ಎಣ್ಮೂರು, ತಾಜು ಅಜ್ಜವರ, ಸಿದ್ದಿಕ್ ಜಟ್ಟಿಪಳ್ಳ, ಷರೀಫ್ ಅಜ್ಜಾವರ, ಲತೀಫ್ ಅಡ್ಕಾರ್, ಖಾದರ್ ಪೈಂಬಚಾಲ್,ಸಿದ್ದೀಕ್ ಡೆಲ್ಮ,ಝುಬೈರ್ ಅರಂತೋಡು, ತಾಜು ಅರಂತೋಡು, ಮುಸ್ತಫ ಗಾಂಧಿನಗರ, ರಜಾಕ್ ಝಮ್ ಝಮ್ ,ನಿಸಾರ್ ಪೈಚರ್, ಅಬ್ದುಲ್ಲ ಗಾಂಧಿನಗರ, ಎಸ್ ಜುಬೇರ್, ಹನೀಫ್ ಅರಂತೋಡು, ಮಜೀದ್ ಅರಂತೋಡು, ಫಯಾಜ್ ಪಟೇಲ್ ಅರಂತೋಡು, ಉನೈಸ್ ಗೂನಡ್ಕ, ಹಾರಿಸ್ ಝಮ್ ಝಮ, ಇಜಾಸ್ ಗೂನಡ್ಕ , ಅಬ್ದುಲ್ಲ ಛೆರೂರ್ ತೆಕ್ಕಿಲ್ ಗೂನಡ್ಕ, ಮುಂತಾದವರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.


ಸಿದ್ದೀಕ್ ಕೋಕೋ ಕಾರ್ಯಕ್ರಮ ನಿರೂಪಿಸಿದರು. ಆರ್.ಕೆ.ಮಹಮ್ಮದ್ ರಾಹುಲ್ ಗಾಂಧಿ ಯವರ ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ವಿವರಿಸಿ ವಂದಿಸಿದರು.