ಕುಡೆಕಲ್ಲು ದಿನೇಶ್ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ದಿನೇಶ್ ಗೌಡ ರವರು ಸೆ. 11 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಮತ್ತು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.26 ರಂದು ಕುಡೆಕಲ್ಲು ಐನ್ ಮನೆಯಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಕುಡೆಕಲ್ಲು ವಾಸುದೇವ ಗೌಡ ಮತ್ತು ಕುಡೆಕಲ್ಲು ರತ್ನಾಕರ ಗೌಡ ರವರು ನುಡಿನಮನ ಸಲ್ಲಿಸಿದರು. ಆಗಮಿಸಿದ ಎಲ್ಕರೂ ಒಂದು ನಿಮಿಷದ ಮೌನ ಪ್ರಾರ್ಥನೆ ಸಮರ್ಪಿಸಿದರು.


ಮೃತರ ಪತ್ನಿ ಶ್ರೀಮತಿ ಕುಸುಮಾವತಿ ಕುಡೆಕಲ್ಲು, ಪುತ್ರ ಪ್ರವೀಣ್ ಕುಮಾರ್ ಕುಡೆಕಲ್ಲು, ಪುತ್ರಿ ಶ್ರೀಮತಿ ರತಿ ,ಅಳಿಯ ಕಿಶೋರ್, ಸೊಸೆ ಶ್ರೀಮತಿ ರೇಷ್ಮಾ ಕುಡೆಕಲ್ಲು ಹಾಗೂ ಕುಟುಂಬದ ಹಿರಿಯ, ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.

LEAVE A REPLY

Please enter your comment!
Please enter your name here