ಸಂಪಾಜೆ : ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಸಂಪಾಜೆ ವಲಯ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾಸಮಿತಿ, ಸಂಪಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾಕಾರ್ಯಕ್ರಮವು ಸೆ.26 ರಂದು ಸಂಪಾಜೆ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ವೈದಿಕರಾದ ಕೃಷ್ಣ ಭಟ್ ರವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಸಂಪಾಜೆ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಆತ್ಮರಾಮ್ ಭಟ್ ನೀಡಿದರು.

ಮುಖ್ಯ ಅಥಿತಿಗಳಾಗಿ ವಿರಾಜಪೇಟೆ ಶಾಸಕರಾದ ಕೆ. ಜಿ. ಬೋಪಯ್ಯ, ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ಬಿ. ಸದಾಶಿವ, ಕೊಡಗು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ, ಸಂಪಾಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ ನಿರ್ಮಲ ಭರತ್, ದೇವಸ್ಥಾನದ ಅಧ್ಯಕ್ಷರಾದ ಜಯಕುಮಾರ್ ಚಿದ್ಕರ್, ಕೊಡಗುಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಧನಂಜಯ ಆಗೋಳಿಕಜೆ, ಯೋಜನಾಧಿಕಾರಿಗಳಾದ ದಿನೇಶ್ ಬಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಆರೋಗ್ಯ ಕಾರ್ಡ್ ಸಾoಕೇತಿಕವಾಗಿ ಶಾಸಕರು ವಿತರಿಸಿದರು. ನಂತರ ಸಾಲ ಬಾಕಿ ಶೂನ್ಯವಾಗಿರುವ ಒಕ್ಕೂಗಳಿಗೆ ಪ್ರಶಸ್ತಿ ನೀಡಲಾಯಿತು.

ಹೊಸದಾಗಿ ಆರಂಭಗೊಂಡ ಸ್ವಸಹಾಯ ಸಂಘಗಳ ಉದ್ಘಾಟನೆ ನಡೆಯಿತು. ಕೃಷಿ ಅಧಿಕಾರಿಗಳಾದ ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಸ್ವಾಗತಿಸಿ ವಲಯಮೇಲ್ವಿಚಾರಕರಾದ ಜಯಶ್ರೀ ವಂದನಾರ್ಪಣೆ ಸಲ್ಲಿಸಿದರು. ನಂತರ ಒಕ್ಕೂಟದ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.