ಬಯಂಬು ಕಾಲನಿಯಲ್ಲಿ ಆರೋಗ್ಯ ಸೋಮವಾರ ಮಾಹಿತಿ ಕಾರ್ಯಕ್ರಮ

0

ಸುಳ್ಯ ತಾಲೂಕಿನ ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಅಡ್ಪಂಗಾಯ ಉಪ ಕೇಂದ್ರ, ಅಜ್ಜಾವರ ಬಯಂಬು ಕಾಲನಿ ನಿವಾಸಿಯವರಿಗೆ ತಾಲೂಕಿನ ವಿನೂತನ ಕಾರ್ಯಕ್ರಮ ಆರೋಗ್ಯ ಸೋಮವಾರ ಮಾಹಿತಿ ಕಾರ್ಯಕ್ರಮ ದಲ್ಲಿ ತಂಬಾಕಿನ ದುಷ್ಪರಿಣಾಮ ಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಮಾಹಿತಿ ನೀಡಿದರು. ಬಯಂಬು ಶ್ರೀ ಮಹಮ್ಮಾಯಿ ಭಜನಾ ಮಂದಿರದ ಅಧ್ಯಕ್ಷರಾದ ಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜಯಶ್ರೀ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಮೋಹಿನಿ ವಂದಿಸಿದರು.