ಸುಬ್ರಹ್ಮಣ್ಯ ಯೋಗ ಶಿಬಿರ ಉದ್ಘಾಟನೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ಶ್ವೇರ ಮಹಾವಿದ್ಯಾಲಯ ಹಾಗೂ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಕೆಎಸ್ ಎಸ್ ಕಾಲೇಜಿನ ಸಭಾಂಗಣದಲ್ಲಿ ಸೆ.26 ರಂದು ಒಂದು ವಾರದ ಉಚಿತ ಯೋಗ ಶಿಕ್ಷಣ ಶಿಬಿರ ಉದ್ಘಾಟನೆಗೊಂಡಿತು.

ಬೆಳಗ್ಗೆ ಶಿಬಿರ ನಡೆಯಲಿದ್ದು ಶಿಬಿರದ ಉದ್ಘಾಟನೆಯನ್ನು ಆಯುಷ್ ಇಲಾಖೆ ಗುತ್ತಿಗಾರಿನ ಯೋಗ ಶಿಕ್ಷಕ ಪ್ರಸನ್ನ ಐ.ಕೆ .ನೆರವೇರಿಸಿದರು .ಕೆ.ಎಸ್. ಎಸ್. ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕ ಡಾ। ಗೋವಿಂದ ಎನ್. ಎಸ್ ಉಪಸ್ಥಿತರಿದ್ದರು. ಎಸ್. ಪಿ .ವೈ .ಎಸ್. ಎಸ್. ಸುಬ್ರಹ್ಮಣ್ಯ ಶಾಖಾ ಸಂಚಾಲಕ ಪ್ರಭಾಕರ ಪಡ್ರೆ ಅವರು ಸ್ವಾಗತಿಸಿದರು . ಹಿರಿಯ ಯೋಗ ಬಂಧು ಸುಬ್ರಹ್ಮಣ್ಯ ಅತ್ಯಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಗ ಬಂಧು ವಿಶ್ವನಾಥ ನಡುತೋಟ ವಂದಿಸಿದರು.