ಕಾಯರ್ತೋಡಿ ಅಂಗನವಾಡಿ ಕೇಂದ್ರದಲ್ಲಿ ಆಯುಷ್ಮಾನ್ ಆಭಾ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮ

0

 

ಗ್ರಾಮ ಒನ್ ನಾಗರಿಕ ‌ಸೇವಾ ಕೇಂದ್ರ ಅರಂತೋಡು, ಸುದ್ದಿ ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ಕಾಯರ್ತೋಡಿ ಅಂಗವಾಡಿ ಕೇಂದ್ರದ ಆಶ್ರಯದಲ್ಲಿ ಆಯುಷ್ಮಾನ್ ಆಭಾ ಕಾರ್ಡಿನ ಉಚಿತ ನೋಂದಣಿ ಕಾರ್ಯಕ್ರಮವು ಸೆ. 26 ರಂದು ಕಾಯರ್ತೊಡಿ‌ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸೂರ್ತಿಲ
ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಅರ್ಪಿತಾ, ಸುದ್ದಿ ವರದಿಗಾರ ಕೃಷ್ಣ ಬೆಟ್ಟ, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದು ಶುಭ ಹಾರೈಸಿದರು.

 

ಗ್ರಾಮ ಒನ್ ಪ್ರತಿನಿಧಿ ಮಂಜುನಾಥ ಪೈ ಅರಂಬೂರು ಪ್ರಾಸ್ತಾವಿಕವಾಗಿ ಮಾತನಾಡಿ ನೋಂದಣಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಜಯಕೃಷ್ಣ, ಮಧುಕೃಷ್ಣ ಕಾಯರ್ತೋಡಿ ಸಹಕರಿಸಿದರು.


ಸುಮಾರು 77 ಮಂದಿ ಆಭಾ ಕಾರ್ಡ್ ನೋಂದಣಿ ಮಾಡಿಸಿದರು.