ಬಳ್ಪ ಶ್ರೀ ತ್ರಿಶೂಲಿನೀ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವ ಆರಂಭ

0

ಬಳ್ಪ ಶ್ರೀ ತ್ರಿಶೂಲಿನೀ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಗಳು ಸೆ. 26ರಿಂದು ಆರಂಭಗೊಂಡಿದ್ದು, ಅ. 5ರ ತನಕ ಜರಗಲಿದೆ.
ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸೆ. 26ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ರಾತ್ರಿ ಹೂವಿನ ಪೂಜೆ, ಹರಿವಾಣ ಪೂಜೆ, ರಂಗಪೂಜೆ ನಡೆಯಿತು. ಸೆ. 29ರಂದು ಕದಿರು ತುಂಬಿಸುವುದು, ನವಾನ್ನ ನಡೆಯಲಿದೆ. ಸೆ. 30ರಂದು ಚಂಡಿಕಾ ಹೋಮ, ಅ. 2ರಂದು ಸಂಜೆ ಶಾರದಾ ಪೂಜೆ ಆರಂಭಗೊಳ್ಳಲಿದೆ. ಅ. 4ರಂದು ಮಹಾನವಮಿ, ಬೆಳಿಗ್ಗೆ 11.00ರಿಂದ ಆಯುಧ ಪೂಜೆ ನಡೆಯಲಿದೆ.

ಅ. 5 ವಿಜಯದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ ಅಪ್ಪಸೇವೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಪೂಜೆ, ಸಪ್ತಶತೀ ಪಾರಾಯಣ, ಮಧ್ಯಾಹ್ನ 11.00ರಿಂದ ಅಕ್ಷರಾಭ್ಯಾಸ, ಮಹಾಪೂಜೆ, ರಾತ್ರಿ ಸಾಮೂಹಿಕ ರಂಗಪೂಜೆ, ರಕ್ತೇಶ್ವರಿ, ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ.