ಸಾಂದೀಪ್ ಶಾಲೆಯಲ್ಲಿ ಸಂಸ್ಥಾಪಕ ದಿನಾಚರಣೆ 

0

ವಿದ್ಯಾರ್ಥಿಗಳಿಗೆ ಸಹಾಯ ಹಸ್ತಾಂತರ ಹಾಗೂ ಹುಟ್ಟು ಹಬ್ಬ ಆಚರಣೆ


ಎಂ ಬಿ ಫೌಂಡೇಷನ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಸಂಸ್ಥಾಪಕ ದಿನಾಚರಣೆ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಹಾಗೂ ಸುಳ್ಯದ ಯುವ ಉದ್ಯಮಿ ಸುಳ್ಯ ಪ್ಯಾಪುಲರ್ ಸ್ವಿಟ್ಸ್ ಮಾಲಕ ಅನುಪ್ ರವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ಸಾಂದೀಪ್ ಶಾಲೆ ಸಭಾಂಗಣದಲ್ಲಿ ಸೆ.26 ರಂದು ನಡೆಯಿತು.


ಕಾರ್ಯಕ್ರಮವನ್ನು ಹಿರಿಯ ಉದ್ಯಮಿ ಅನಂತೇಶ್ವರ ಪೈ ಹಾಗೂ ಅಶ್ವಿನಿ ಪೈ ಯವರು ಉದ್ಘಾಟಿಸಿದರು.
ಸಾಂದೀಪ್ ಶಾಲೆ ಸ್ಥಾಪಕರು ಎಂ ಬಿ ಫೌಂಡೇಷನ್ ಅಧ್ಯಕ್ಷ ಎಂ ಬಿ ಸದಾಶಿವ ರವರನ್ನು ಶಾಲೆ ಸಂಚಾಲಕಿ ಹರಿಣಿ ಸದಾಶಿವ, ಟ್ರಸ್ಟಿ ಗಳಾದ ಪುಷ್ಪಲತಾ ರಾಧಾಕೃಷ್ಣ ಮಾಣಿಬೆಟ್ಟು,ಸೂರಯ್ಯ ಸೂಂತೋಡು, ರವರು ಹಾಗೂ ಅತಿಥಿಗಳು,ಶಾಲಾ ಶಿಕ್ಷಕರು ಮತ್ತು ಮಕ್ಕಳು ಸೇರಿ ಸಂಸ್ಥಾಪಕ ದಿನದ ಅಂಗವಾಗಿ ಗೌರವಿಸಿ ಅಭಿನಂದಿಸಲಾಯಿತು.


ಇದೇ ಸುಳ್ಯದ ಉದ್ಯಮಿ ಪ್ಯಾಪುಲರ್ ಸ್ವೀಟ್ಸ್ ಮಾಲಕ ಅನುಪ್ ರವರು ಹುಟ್ಟು ಹಬ್ಬ ಆಚರಿಸಿ ಸಾಂದೀಪ್ ಶಾಲೆಯ ಮಕ್ಕಳಿಗೆ ಅನ್ನದಾನವನ್ನು ಮಾಡಿದರು.
ಮುಖ್ಯಾತಿಥಿಗಳಾದ ಉದ್ಯಮಿ ಕೇಶವ ನಾಯಕ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅನುಪ್ ರವರ ತಂದೆ ಅನಂತೇಶ್ವರ ಪೈ ಸಾಂದೀಪ್ ಗೆ ವಿಶೇಷ ಸಹಾಯಧನ ನೀಡಿದರು.


ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಮಾಣಿಬೆಟ್ಟು, ವೆಂಕಟರಮಣ ಸೊಸೈಟಿ ನಿರ್ದೇಶಕಿ ನಳಿನಿ ಸೂರಯ್ಯ,ಮೊದಲಾದವರು ಉಪಸ್ಥಿತರಿದ್ದರು.
ಸಾಂದೀಪ್ ಶಾಲೆ ಟ್ರಸ್ಟಿ ಶರೀಫ್ ಸುದ್ದಿ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,ಶಾಲಾ ಸಂಚಾಲಕಿ ಹರಿಣಿ ಸದಾಶಿವ ವಂದಿಸಿದರು. ಶಿಕ್ಷಕಿ ಸೌಮ್ಯ, ಚಾಂದನಿ ಸಹಕರಿಸಿದರು.

LEAVE A REPLY

Please enter your comment!
Please enter your name here