ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯ ಅದ್ಭುತ ಸಾಧನೆ

0

ತನ್ವಿ ಎಂ.ಜಿ.ಯೋಗಾಸನದಲ್ಲಿ ನೊಬೆಲ್ ವಿಶ್ವ ದಾಖಲೆ

ದಾವಣಗೆರೆಯ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ ವಾರ್ಷಿಕೋತ್ಸವ ದಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 80 ವಿದ್ಯಾರ್ಥಿಗಳಲ್ಲಿ ಕುಮಾರ ಸ್ವಾಮಿ ವಿದ್ಯಾಸಂಸ್ಥೆಯ ತನ್ವೀ ಎಂ.ಜಿ ವೃಕ್ಷಾಸನ, ಉತ್ಕಟಾಸನ, ಧನುರ್ ಆಸನ, ಸರ್ವಾಂಗಾಸನದಲ್ಲಿ ನಿರಂತರ 120 ಸೆಕೆಂಡುಗಳ ಕಾಲ ಯೋಗ ಪ್ರದರ್ಶಿಸಿ ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ನಿರಂತರ ಯೋಗ ಕೇಂದ್ರ ಪಂಜ ಇದರ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಶಿಷ್ಯೆಯಾಗಿರುವ ಇವಳು, ಗುತ್ತಿಗಾರು ಚಿಕ್ಮುಳಿ ಗೋಪಾಲಕೃಷ್ಣ ಮತ್ತು ಕವಿತಾ ದಂಪತಿಗಳ ಪುತ್ರಿ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ.