ಪಂಜದ ಅನ್ವಿತಾ ಶೆಟ್ಟಿ ಯೋಗಾಸನದಲ್ಲಿ ನೊಬೆಲ್ ವಿಶ್ವ ದಾಖಲೆ

0

ದಾವಣಗೆರೆಯ ಸಪ್ತಋಷಿ ಯೋಗಾಸನ ಕ್ರೀಡಾ ಅಕಾಡೆಮಿ ವಾರ್ಷಿಕೋತ್ಸವದಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 80 ವಿದ್ಯಾರ್ಥಿಗಳಲ್ಲಿ
ಕಡಬ ಸೈಂಟ್ ಆನ್ಸ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿನಿ ಪಂಜದ ಅನ್ವಿತಾ ಶೆಟ್ಟಿ ವೃಕ್ಷಾಸನ, ಉತ್ಕಟಾಸನ, ಧನುರ್ ಆಸನ, ಸರ್ವಾಂಗಾಸನದಲ್ಲಿ ನಿರಂತರ 120 ಸೆಕೆಂಡುಗಳ ಕಾಲ ಯೋಗ ಪ್ರದರ್ಶಿಸಿ ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.


ನಿರಂತರ ಯೋಗ ಕೇಂದ್ರ ಪಂಜ ಇದರ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಶಿಷ್ಯೆಯಾಗಿರುವ ಇವಳು. ಪಂಜದ ಪಲ್ಲೋಡಿ ಜಗನಾಥ್ ಶೆಟ್ಟಿ ಮತ್ತು ಶ್ರೀಮತಿ ಜಯಲಕ್ಷ್ಮಿ. ಜೆ. ಶೆಟ್ಟಿ ರವರ ಪುತ್ರಿ.