ಸುಳ್ಯ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ವಾರ್ಷಿಕ ಮಹಾಸಭೆ

0

ಸುಳ್ಯ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ವಾರ್ಷಿಕ ಮಹಾಸಭೆಯು ಸೆ.೨೪ ರಂದು ಒಕ್ಕೂಟದ ಸಭಾಭವನದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ ಪಿ.ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು.


ಒಕ್ಕೂಟದ ಪೂರ್ವಾಧ್ಯಕ್ಷೆ ಹರಿಣಿ ಸದಾಶಿವ, ಮಹಾಲಕ್ಷ್ಮಿ ಕೊರಂಬಡ್ಕ, ನಿಕಟಪೂರ್ವ ಕಾರ್ಯದರ್ಶಿ ಸುಮನಾ ಕೃಪಾಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಲಕ್ಷ್ಮಿ ಕೊರಂಬಡ್ಕ ರವರು ಮಹಿಳಾ ಒಕ್ಕೂಟಕ್ಕೆ ಹಾಗೂ ತಾಲ್ಲೂಕಿನ ಎಲ್ಲ ಮಹಿಳಾ ಮಂಡಳಗಳಿಗೂ ಆಡಳಿತದ ವೈಖರಿಯಲ್ಲಿ ಕುಂದುಕೊರತೆಗಳು ಬಾರದಂತೆ ಸೂಕ್ತ ರೀತಿಯಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಶ್ರೀಮತಿ ಹರಿಣಿ ಸದಾಶಿವರು ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಸಂಘಸಂಸ್ಥೆಗಳಿಗೆ ದುಡಿಯಬೇಕೆಂದು ತಿಳಿಸಿದರು. ಸುಮನ ಕೃಪಾಶಂಕರ್ ಅವರು ತಾಲ್ಲೂಕಿನ ಮಹಿಳಾ ಮಂಡಳಗಳು ಒಕ್ಕೂಟದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಹೇಳಿದರು.


ಸಭೆಯಲ್ಲಿ ಬೈಲಾ ತಿದ್ದುಪಡಿಗಾಗಿ ಹಲವು ಕಾಲಂಗಳ ಪ್ರಸ್ತಾಪನೆ ಇಡಲಾಯಿತು ನಿರ್ದೇಶಕಿ ಜಯಲಕ್ಷ್ಮೀ ಅವರ ತೆರವಾದ ಸ್ಥಾನಕ್ಕೆ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ರವರನ್ನು ಆಯ್ಕೆ ಮಾಡಲಾಯಿತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ವನಿತಾ ಸಮಾಜ ಪಂಜದ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ ಕಾನತ್ತೂರು ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷೆ ಸ್ವಾಗತಿಸಿ, ಒಕ್ಕೂಟದ ಉಪಾಧ್ಯಕ್ಷೆ ಮಧುಮತಿ ಪಿ. ವರದಿ ವಾಚಿಸಿದರು. ಸುನಿತಾ ರಾಮಚಂದ್ರ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.