ಮುತ್ತಿನ ನಗರಿಯಲ್ಲಿ ಜೋಸ್ ಆಲುಕ್ಕಾಸ್‌ನ ಚತುರ್ಥ ಸಂಭ್ರಮಾಚರಣೆಗೆ ಚಾಲನೆ

0

ಪ್ರತೀ ಖರೀದಿಗೆ ಬೆಲೆಬಾಳುವ ಉಡುಗೊರೆ 

ಗ್ರಾಹಕರಿಂದ ತುಂಬಿ ತುಳುಕಿದ ಶೋರೂಂ

 ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ಪುತ್ತೂರಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ವಿವಿಧ ರಾಜ್ಯಗಳಲ್ಲಿ ಐವತ್ತಕ್ಕಿಂತಲೂ ಹೆಚ್ಚಿನ ಶಾಖೆಗಳನ್ನು ಹೊಂದಿರುವ ಸಂಸ್ಥೆ ಕೇವಲ ವ್ಯಾಪಾರದ ದೃಷ್ಟಿಕೋನವನ್ನು ಇಟ್ಟುಕೊಳ್ಳದೆ ಸಾಮಾಜಿಕವಾಗಿಯೂ ಹಿಂದಿರುವವರಿಗೆ, ಅಶಕ್ತರಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದಿರುವುದು ಅಭಿನಂದನಾರ್ಹ. ಜಿಲ್ಲಾಕೇಂದ್ರವಾಗಿ ರೂಪುಗೊಳ್ಳುವ ಪುತ್ತೂರಿಗೆ ಇಂತಹ ಸಂಸ್ಥೆಗಳು ಅವಶ್ಯಕ. ಆಧುನಿಕ ವಿನ್ಯಾಸದ ಅಭರಣಗಳನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಜೋಸ್ ಆಲುಕ್ಕಾಸ್‌ನ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು. 

ಸೆ.26ರಂದು ಪುತ್ತೂರಿನ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶಾಖೆಯನ್ನು ಹೊಂದಿರುವ ಅಂತರ್ರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್‌ನ ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಂದಿನ ದಿನಗಳಲ್ಲಿ ಕೇಂದ್ರ ಸ್ಥಾನವಾಗಲಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳು ಪೂರಕ. ಹೊಸ ಹೊಸ ವಿನ್ಯಾಸ ಹಾಗು ಸ್ಪರ್ಧಾತ್ಮಕ ಬೆಲೆಯಲ್ಲಿ ಆಭರಣಗಳನ್ನು ನೀಡುವ ಮೂಲಕ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಈ ಭಾಗದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿನ್ನಾಭರಣ ವ್ಯಾಪಾರದಲ್ಲಿ ಸಂಸ್ಥೆ ತನ್ನದೇ ಆದ ಛಾಪನ್ನು ಮೂಡಿಸಿದೆ ಎನ್ನುವುದಕ್ಕೆ ಇಂದಿಲ್ಲಿ ತುಂಬಿಕೊಂಡಿರುವ ಗ್ರಾಹಕ ವರ್ಗವೇ ಸಾಕ್ಷಿ ಎಂದ ಶಾಸಕರು ನಾಲ್ಕು ವರ್ಷದ ಸಾರ್ಥಕ ಸೇವೆಯನ್ನು ಸಲ್ಲಿಸಿದ ಈ ಸಂಸ್ಥೆಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದರು.

ರಾಜ್ ಸೌಂಡ್ಸ್ ಆಂಡ್ ಲೈಟ್ ಚಿತ್ರದ ನಿರ್ದೇಶಕ ರಾಹುಲ್ ಅಮೀನ್‌ರವರು ಮಾತನಾಡಿ ನಮಗೆ ಇಲ್ಲಿ ಬಂದಿರುವುದು ತಂಬಾ ಕುಶಿ ಕೊಟ್ಟಿದೆ. ಸಂಸ್ಥೆ ತನ್ನ ನಾಲ್ಕನೇ ವರ್ಷಾಚರಣೆಯ ಸಂಭ್ರಮಾಚರಣೆಯನ್ನು ಬಹಳ ಅದ್ಧೂರಿಯಾಗಿ ಆಯೋಜನೆ ಮಾಡಿದೆ. ಈ ಭಾಗದ ಜನ ಸಂಸ್ಥೆಯನ್ನು ಎಷ್ಟು ನೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಸೇರಿರುವ ಗ್ರಾಹಕ ವರ್ಗವೇ ಸಾಕ್ಷಿಯಾಗಿದೆ. ಸಂಸ್ಥೆ ಆರಂಭಿಸಿರುವ ಚಿನ್ನಾಭರಣ ಸ್ಕೀಂಗಳು ಬಡವರ್ಗದ ಜನರಿಗೆ ಬಹಳಷ್ಟು ಉಪಕಾರಿಯಾಗಿದೆ. ಸಂಸ್ಥೆ ವಾರ್ಷಿಕೋತ್ಸವದ ಪ್ರಯುಕ್ತ ಡಿಸ್ಕೌಂಟ್ ಕೂಡಾ ನೀಡುತ್ತಿದೆ ಎಂದು ಹೇಳಿ ಗ್ರಾಹಕರೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.

ರಾಜ್ ಸೌಂಡ್ಸ್ ಆಂಡ್ ಲೈಟ್ ಚಿತ್ರದ ನಟಿ ಚೈತ್ರಾ ಶೆಟ್ಟಿರವರು ಮಾತನಾಡಿ ಜೋಸ್ ಆಲುಕ್ಕಾಸ್ ಸಂಸ್ಥೆಯ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿರುವುದು ತುಂಬಾ ಸಂತಸವಾಗಿದೆ. ನಾನು ಸಂಸ್ಥೆಯಲ್ಲಿರುವ ಚಿನ್ನ, ಬೆಳ್ಳಿ ಹಾಗೂ ಡೈಮಂಡ್ ಕಲೆಕ್ಷನನ್ನು ಗಮನಿಸಿದೆ. ಒಂದಕ್ಕಿಂತ ಒಂದು ಬಲು ಸೊಗಸಾಗಿದೆ. ಮಂಗಳೂರಿನಲ್ಲಿ ಸಿಗುವ ಕಲೆಕ್ಷನ್ ಗಿಂತಲೂ ಹೆಚ್ಚಿನ ಆಯ್ಕೆ ಇಲ್ಲಿದೆ. ಮೇಕಿಂಗ್ ಚಾರ್ಜಸ್ ಕೂಡಾ ಬಹಳಷ್ಟು ಕಡಿಮೆ ಇದೆ. ಎಲ್ಲರೂ ಇಲ್ಲಿಗೆ ಬಂದು ಪರ್ಚೇಸ್ ಮಾಡಿ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು

ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷರಾದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಸಂಸ್ಥೆಯ ನಾಲ್ಕನೇ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ಸಂಸ್ಥೆ ಗ್ರಾಹಕರಿಂದ ತುಂಬಿಕೊಂಡಿರುವುದು ನೋಡಿದರೆ ಬಹಳಷ್ಟು ಸಂತಸವಾಗುತ್ತಿದೆ. ನಾನು ಈ ಸಂಸ್ಥೆಯ ರೆಗ್ಯೂಲರ್ ಕಸ್ಟಮರ್. ನಮಗೊಪ್ಪುವ ಒಳ್ಳೆಯ ಕಲೆಕ್ಷನ್‌ಗಳು ಇಲ್ಲಿದೆ. ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆಯೇ ಇವರ ಯಶಸ್ಸಿನ ಗುಟ್ಟಾಗಿದೆ. ಚಿನ್ನ ಬೆಳ್ಳಿಯಂತೆಯೇ ಡೈಮಂಡ್ ಕಲೆಕ್ಷನ್ ಕೂಡಾ ತುಂಬಾ ಚೆನ್ನಾಗಿದೆ. ಒಮ್ಮೆ ಬಂದ ಗ್ರಾಹಕರನ್ನು ಮತ್ತೊಮ್ಮೆ ಬರುವಂತೆ ಮಾಡುವ ಕಲೆಕ್ಷನ್ ಇಲ್ಲಿದೆ. ಸಂಸ್ಥೆಗೆ ಇನ್ನಷ್ಟು ಯಶಸ್ಸಾಗಲಿ ಎಂದರು. ಗ್ರಾಹಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಾಲ್ಕನೇ ವರ್ಷದ ಸಂಭ್ರಮಾಚರಣೆಯನ್ನು ಅತಿಥಿಗಳು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ದಿನದ ಪ್ರಥಮ ಗ್ರಾಹಕರೋರ್ವರಿಗೆ ಶಾಸಕ ಸಂಜೀವ ಮಠಂದೂರುರವರು ಚಿನ್ನಾಭರಣ ಹಸ್ತಾಂತರ ಮಾಡಿದರು. ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಬೆಳಗ್ಗಿನಿಂದಲೇ ಚಿನ್ನಾಭರಣವನ್ನು ಕೊಂಡುಕೊಳ್ಳಲು ಗ್ರಾಹಕರು ಬರಲಾರಂಭಿಸಿದ್ದು, ಸಂಸ್ಥೆ ತುಂಬಿತುಳುಕಿತ್ತು.

ರಾಜ್ ಸೌಂಡ್ಸ್ ಆಂಡ್ ಲೈಟ್ ಚಿತ್ರದ ಸಹನಿರ್ಮಾಪಕ ಪವನ್ ಕುಮಾರ್, ಸ್ಥಳೀಯರಾದ ಶಮೀರ್ ಕೂರ್ನಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಏರಿಯಾ ಮ್ಯಾನೇಜರ್ ಬಿಜು ಸ್ವಾಗತಿಸಿದರು. ಅಕೌಂಟ್ ಮ್ಯಾನೇಜರ್ ಮನೋಜ್, ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ರತೀಶ್ ಸಿ.ಪಿ. ಸಿಬ್ಬಂದಿಗಳಾದ ಶಿಬು, ರಾಜೇಶ್ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮಂಗಳೂರು ಶಾಖಾ ಫ್ಲೋರ್ ಮ್ಯಾನೇಜರ್ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಾಲ್ಕನೇ ವಾರ್ಷಿಕೋತ್ಸವದ ಭರ್ಜರಿ ಆಫರ್: ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವುದರ ಮೂಲಕ ಅದ್ದೂರಿಯ ಆಚರಣೆಗೆ ಸಿದ್ಧತೆ ಮಾಡಲಾಗಿದೆ. ಹೊಸ ಸ್ಟಾಕ್, ಹೊಸ ಸಂಗ್ರಹಗಳು ಮತ್ತು ಹೊಚ್ಚ ಹೊಸ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಅಲ್ಲದೇ ಮದುವೆ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಘೋಷಿಸಿದೆ. ಪ್ರತಿ ಖರಿದೀಗೆ ಉಚಿತ ಬೆಲೆಬಾಳುವ ಉಡುಗೊರೆಗಳು, ಲಕ್ಕಿ ಡ್ರಾದ ಮೂಲಕ ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ, ಪ್ಲಾಟಿನಂ ಆಭರಣಗಳಿಗೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ ದೊರೆಯಲಿದೆ. ಬಿಐಎಸ್ ಪ್ರಮಾಣೀಕೃತ 916 ಚಿನ್ನದ ಆಭರಣಗಳ ಅತ್ಯಪೂರ್ವ ಸಂಗ್ರಹವೇ ಇಲ್ಲಿದ್ದು, ಕಡಿಮೆ ಮೇಕಿಂಗ್ ಚಾರ್ಜಸ್ ಹಾಗೂ ಬೈ ಬ್ಯಾಕ್ ಗ್ಯಾರಂಟಿ ಯನ್ನು ಸಂಸ್ಥೆ ನೀಡಲಿದೆ. ವಾರ್ಷಿಕೋತ್ಸವದ ವಿಶೇಷ ಆಫರ್ ಗಳು ಸೆ.26ರಂದು ಆರಂಭಗೊಂಡು ಸೆ.30ರಂದು ಕೊನೆಗೊಳ್ಳಲಿದೆ.

ಸೆ.30ರ ವರೆಗೆ ಮುಂದುವರೆಯಲಿದೆ ವಾರ್ಷಿಕೋತ್ಸವದ ಕೊಡುಗೆ

ಪ್ರತಿ ಖರೀದಿಗೆ ಉಚಿತ, ಬೆಲೆಬಾಳುವ ಉಡುಗೊರೆಗಳು, ಲಕ್ಕಿ ಡ್ರಾದ ಮೂಲಕ, ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ, ಪ್ಲಾಟಿನಂ ಅಭರಣಗಳಿಗೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ

 

ಪ್ರಥಮ ದಿನವೇ ನಿರೀಕ್ಷೆಗೂ ಮೀರಿದ ಗ್ರಾಹಕರು

ನಮ್ಮ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ. ಪ್ರಥಮ ದಿನವೇ ಗ್ರಾಹಕರಿಂದ ನಮಗೆ ನಿರೀಕ್ಷೆಗೂ ಮೀರಿದ ಸ್ಪಂಧನೆ ದೊರೆತಿದೆ. ವಾರ್ಷಿಕೋತ್ಸವದ ಕೊಡುಗೆಗಳು ಆರಂಭಗೊಂಡಿದ್ದು ಸೆ.30ರಂದು ಕೊನೆಗೊಳ್ಳಲಿದೆ. ಪ್ರತಿಯೊಂದು ಖರೀದಿಗೂ ವಿಶೇಷ ಕೊಡುಗೆಗಳ ಜೊತೆ ಲಕ್ಕಿ ಕೂಪನ್ ದೊರೆಯಲಿದೆ.

ಪುತ್ತೂರಿನ ಜನರು ಆರಂಭದ ದಿನದಿಂದಲೇ ನಮ್ಮ ಸಂಸ್ಥೆಗೆ ಬಹಳಷ್ಟು ಸಹಕಾರವನ್ನು ಮಾಡಿದ್ದಾರೆ. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ನಾವು ಬಯಸುತ್ತಿದ್ದೇವೆ.

ರತೀಶ್ ಸಿ.ಪಿ.., ಪುತ್ತೂರು ಶಾಖಾ ವ್ಯವಸ್ಥಾಪಕರು