ನವೀಕರಣಗೊಂಡು ಶುಭಾರಂಭಗೊಂಡ ಸುಳ್ಯದ ಆರ್‌ಕುಟ್ ಮೊಬೈಲ್

0
419

ವಿಶೇಷ ಆಫರ್‌ನೊಂದಿಗೆ ಸ್ಕ್ರಾಚ್ & ವಿನ್ ಸೌಲಭ್ಯ

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆಗಳಲ್ಲಿ ಒಂದಾಗಿರುವ ಆರ್‌ಕುಟ್ ಮೊಬೈಲ್ ನವೀಕೃತಗೊಂಡು ಸೆ. ೨೮ರಂದು ಜನತಾ ಸ್ಟೋರ್‌ನ ಎದುರುಗಡೆ ಇರುವ ಗ್ಲೋಬಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ದ.ಕ ಜಿಲ್ಲಾ ,ಮೊಬೈಲ್ ರಿಟೇಲರ್ ಎಸೋಸಿಯೇಸನ್ ಅಧ್ಯಕ್ಷ ಶೈಲೇಂದ್ರ ಸರಳಾಯ, ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಎಂ.ಕೆ. ಲತೀಫ್, ಖಲಂದರ್ ಎಲಿಮಲೆ, ಸುಳ್ಯಕಾರ್‍ಸ್ ಅಬ್ದುಲ್ಲಾ, ಡಾ. ರಾಮ ಮೇನಾಲ, ಗಣೇಶ್ ಆಳ್ವ ಮೊದಲಾದ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಆರ್‌ಕುಟ್ ಮಾಲಕ, ಸುಳ್ಯ ತಾಲೂಕು ಮೊಬೈಲ್ ರಿಟೇಲರ್ ಅಸೋಸಿಯೇಶನ್ ಅಧ್ಯಕ್ಷ ಶಬೀರ್, ಸಿಬ್ಬಂದಿಗಳಾದ ನವೀನ್ ಕಲ್ಲುಗುಂಡಿ, ಲವನ್ ಉಬರಡ್ಕ, ಜಮಲ್ ಜಟ್ಟಿಪಳ್ಳ, ನಿಝಾರ್ ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡರು.

 

ಸುಮಾರು 15  ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆರ್‌ಕುಟ್ ಮೊಬೈಲ್‌ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಇದ್ದು, ಪ್ರತೀ 2 ಸಾವಿರದ ಖರೀದಿಗೆ ಕೂಪನ್ ನೀಡಲಾಗುತ್ತಿದೆ. ಅಲ್ಲದೆ ಸ್ಥಳದಲ್ಲೇ ಸ್ಕ್ರಾಚ್ & ವಿನ್ ಸೌಲಭ್ಯವಿದೆ.

LEAVE A REPLY

Please enter your comment!
Please enter your name here