ಮಾದಕ ವ್ಯಸನಗಳ ಜಾಗೃತಿ ಕುರಿತು ಕಾನೂನು ಅರಿವು ಕಾರ್ಯಕ್ರಮ

0
129

 

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ತಾಲೂಕು ಆಡಳಿತ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಶಿಕ್ಷಣ ಇಲಾಖೆ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸುದ್ದಿ ಸಮೂಹ ಮಾಧ್ಯಮ ಸುಳ್ಯ, ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನಗಳ ಜಾಗೃತಿ ಕುರಿತು ಕಾನೂನು ಅರಿವು ಕಾರ್ಯಕ್ರಮ ಸ 29ರಂದು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ನಡೆಯಿತು.

 

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಕಿರಿಯ ನ್ಯಾಯಾಲಯದ ಸಿವಿಲ್ ನ್ಯಾಯಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಕು. ಅರ್ಪಿತಾ ನೆರವೇರಿಸಿದರು. ಉದ್ಘಾಟಕರಾಗಿ ಮಾತನಾಡಿದ ಅವರು ಮಾದಕ ದ್ರವ್ಯ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿದೆ.ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಮಸ್ಯೆಗೆ ಬಲಿಯಾಗದೆ ದೇಶದ ಏಳಿಗೆಯಲ್ಲಿ ನಾವು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಳ್ಯ ಆರಕ್ಷಕ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಮಾತನಾಡಿ ಶಿಕ್ಷಣದ ಜ್ಞಾನ ಹೆಚ್ಚಿಸಲು ಸಂಸ್ಕಾರದ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಶಿಕ್ಷಣದ ಉದ್ದೇಶ ಪರಿಪೂರ್ಣವಾಗುವುದು ಸಂಸ್ಕಾರಯುತ ನಡವಳಿಕೆಗಳ ಮೂಲಕ.ಶಾಲಾ,ಕಾಲೇಜು ವಿದ್ಯಾರ್ಥಿಗಳ ವಯಸ್ಸು ಪ್ರಯೋಗ ಶಾಲೆ ಇದ್ದಂತೆ. ಇಂದು ಮಾದಕ ದ್ರವ್ಯ ಸೇವನೆ ಪ್ರತಿಷ್ಠೆಯ ವಿಷಯವಾಗಿದೆ. ಜೀವನ ಶೈಲಿಯಲ್ಲಿ ಬದಲಾವಣೆಯಾಗುತ್ತಿದೆ.ಯವ ಸಮುದಾಯ ಇದಕ್ಕೆ ಬಲಿಯಾಗುತ್ತಿದ್ದಾರೆ. ಜೀವನದಲ್ಲಿ ಡ್ರಗ್ಸ್ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದರೆ ನೀವು ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಯುವ ಜನರನ್ನು ದಾರಿಗೆ ತರಲು ಈ ಕಾರ್ಯಕ್ರಮ ಆಯೋಜಿಸಿದ್ದು ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಸುಳ್ಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಜನಾರ್ಧನ ಬಿ,ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್,ಸುಳ್ಯದ ಉಪ ವಲಯ ಅರಣ್ಯ ಅಧಿಕಾರಿ ಯಶೋಧರ,ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಎನ್ ಎಂ ಸಿ ಪ್ರಾಂಶುಪಾಲರಾದ ಪ್ರೊ ರುದ್ರಕುಮಾರ್ ಎಂ ಎಂ,ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ,ಸಾವಿತ್ರಿ ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿ ಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿನಿಯರಾದ ನಿಶ್ವಿತಾ ಮತ್ತು ಬಳಗದವರು ಪ್ರಾರ್ಥಿಸಿದರು.ವಿ. ಕ್ಷೇಮಾಧಿಕಾರಿ ಸಾವಿತ್ರಿ ಕೆ ಸ್ವಾಗತಿಸಿ,ಉಪನ್ಯಾಸಕಿ ಕು ಬೇಬಿ ವಿದ್ಯಾ ಪಿ.ಬಿ. ನಿರೂಪಿಸಿದರು.ಉಪನ್ಯಾಸಕಿ ರೇಷ್ಮಾ ಎಂ ಎಂ ವಂದಿಸಿದರು.

 

LEAVE A REPLY

Please enter your comment!
Please enter your name here