ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವ ಹಿನ್ನೆಲೆ

0

 

ಅ.2ರಂದು ದೋಟಿ ಮತ್ತು ಯಂತ್ರೋಪಕರಣಗಳ ತರಬೇತಿ ಹಾಗೂ ಪ್ರಾತ್ಯಕ್ಷತೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮವು ಅಕ್ಟೋಬರ್ 16ರಂದು ಜರುಗಲಿದ್ದು, ಆ ಪ್ರಯುಕ್ತ ದೋಟಿ ಮತ್ತು ಯಂತ್ರೋಪಕರಣಗಳ ತರಬೇತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮವು ಅ.2ರಂದು ಬೆಳಿಗ್ಗೆ ಕನಕಮಜಲಿನ ಕೃಷಿಕ ಗುಡ್ಡಪ್ಪ ಗೌಡ ದೇವರಗುಂಡ ಅವರ ಕೃಷಿ ತೋಟದಲ್ಲಿ ಜರುಗಲಿದೆ.
ಕನಕಮಜಲು ಯುವಕ ಮಂಡಲ, ಸುಳ್ಯ ತೋಟಗಾರಿಕಾ ಇಲಾಖೆಯು ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವು ಜರುಗಲಿದ್ದು, ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು, ಸಹಾಯಕ ತೋಟಗಾರಿಕಾ ಅಧಿಕಾರಿ ಅರ್ಬಣ್ಣ ಪೂಜಾರ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಸಹಕಾರಿ ಸಂಘದ ನಿರ್ದೇಶಕರುಗಳು, ಶತಮಾನೋತ್ಸವದ ಸಲಹಾ ಸಮಿತಿಯ , ಉಪಸಮಿತಿಯ ಪದಾಧಿಕಾರಿಗಳು, ಯುವಕ ಮಂಡಲದ ಪದಾಧಿಕಾರಿಗಳು, ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರುಗಳು, ಸಿಬ್ಬಂದಿಗಳು ಹಾಗೂ ಜಾಲ್ಸೂರು, ಕನಕಮಜಲು ಗ್ರಾಮದ ಕೃಷಿಕರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here